ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಜನ್ 11 ರ ಗ್ರ್ಯಾಂಡ್ ಫಿನಾಲೆ ಜನವರಿ 26 ರಂದು ಭಾನುವಾರ ನಡೆಯುತ್ತಿದ್ದು ಸಮಾರಂಭದ ಆರಂಭಸದಲ್ಲಿ ಕಿಚ್ಚ ಸುದೀಪ್ ರವರು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದ ಕನ್ನಡ ಚಲನಚಿತ್ರ ರಂಗದ ಹಿರೀಯ ನಟ ಅನಂತನಾಗ್ ರವರಿಗೆ ಬಿಗ್ ಬಾಸ್ ವೇದಿಕೆಯಲ್ಲಿಯೇ ಅಭಿನಂದನೆ ಸಲ್ಲಿಸಿದರು.
ಕನ್ನಡ ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿರುವ ನನ್ನ ನೆಚ್ಚಿನ ನಟರಾದ ಅನಂತನಾಗ್ ಸರ್ ನಿಮಗೆ ಕನ್ನಡಿಗರ ಪರವಾಗಿ ಅಭಿನಂದನೆಗಳು. ಈ ಪ್ರಶಸ್ತಿ ನಿಮಗೆ ಎಂದೋ ಸಿಗಬೇಕಿತ್ತು. ಲೇಟ್ ಆದರೂ ಲೇಟೆಸ್ಟ ಆಗಿ ಸಿಗುತ್ತಿದ್ದು ನಮಗೆಲ್ಲ ಹೆಮ್ಮೆ ತಂದಿದೆ. ಇನ್ನಷ್ಟು ಕಾಲ ನೀವು ಆರೋಗ್ಯವಂತರಾಗಿ ಇದ್ದು ಚಿತ್ರರಂಗಕ್ಕೆ ಕೊಡುಗೆ ನೀಡಬೇಕೆಂಬುದು ನಮ್ಮ ಪ್ರಾರ್ಥನೆ ಎಂದು ಹೇಳುವ ಮೂಲಕ ಕಿಚ್ಚ ಸುದೀಪ್ ಅಭಿನಂದನೆ ಸಲ್ಲಿಸಿದ್ದಾರೆ.