ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ನಡುವೆಯೂ ಭಾನುವಾರ ಬೆಳ್ಳಂಬೆಳಿಗ್ಗೆ ಮಳೆಯ ಆಗಮನವಾಗಿದೆ. ಬೆಳಿಗ್ಗೆ ಜಿಟಿಜಿಟಿ ಮಳೆಯಾಗಿದ್ದು ಸದ್ಯ ಮೋಡಕವಿದ ವಾತಾವರಣ ಕಂಡುರುತ್ತಿದೆ. ಇನ್ನೂ ಕೆಲ ದಿನಗಳ ಕಾಲ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸೊದೆ.

ಇಂತಹ ಚಳಿಗಾಲದಲ್ಲಿ ಮಣೆಯಾಗುತ್ತಿರುವುದನದ್ನು ಕಂಡು ಜನ ಕಂಗಾಲಾಗಿದ್ದಾರೆ. ಬೆಂಗಳೂರಿನ ಪೀಣ್ಯ, ದಾಸರಹಳ್ಳಿ,ಹೆಸರಘಟ್ಟ, ಮೆಜೆಸ್ಟಿಕ್, ವಿಧಾನಸೌಧ,ಜೆಪಿ ನಗರ, ರಿಚ್ ಮಂಡ್ ವೃತ್ತ, ಟೌನ್ ಹಾಲ್ ಸೇರಿದಂತೆ ಬೆಂಗಳೂರಿನ ಹಲವೆಡೆ ಭಾನುವಾರ ಬೆಳಿಗ್ಗೆ ಮಳೆಯಾಗಿದೆ.

ಇದೇ ರೀತಿ ಕರ್ನಾಟಕ ರಾಜ್ಯದ ಕರಾವಳಿ ದಕ್ಷಿಣಕನ್ನಡ, ಚಿಕ್ಕಮಗಳೂರು,ಹಾಸನ, ಕೊಡಗು,ಕೋಲಾರ,ಮಂಡ್ಯ, ಮೈಸೂರು, ರಾಮನಗರದಲ್ಲಿಯೂ ಇನ್ನು ಒಂದು ವಾರ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.

ಅಂತೆಯೇ ಉತ್ತರಕನ್ನಡ, ಉಡುಪಿ,ಬಾಗಲಕೋಟೆ,ಬೆಖಗಾವಿ,ಬೀದರ್, ಧಾರವಾಡ,ಗದಗ,ಹಾವೇರಿ,ಕಲಬುರ್ಗಿ,ಕೊಪ್ಪಳ,ರಾಯಚೂರು, ವಿಜಯಪುರ, ಶಿವಮೊಗ್ಗ ಭಾಗದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿದ್ದು ಒಳಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.