ಸುದ್ದಿ ಕನ್ನಡ ವಾರ್ತೆ
ಆಳಂದ: ಪುರಸಭೆಯಿಂದ ೧೦ ಲಕ್ಷ ಲೀಟರ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಳಪಾಯ ತೆಗೆಯುತ್ತಿದ್ದಾಗ ಶಿಲಾ ಕೆತ್ತನೆಯ ಶಿವಲಿಂಗ ದೊರೆತ ಅಪರೋಪದ ಘಟನೆ ಪಟ್ಟಣದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಇಲ್ಲಿನ ಬಸ್ ನಿಲ್ದಾಣ ಮಾರ್ಗದ ಎಸ್‌ಆರ್‌ಜಿ ಶಾಲಾ ಹಿಂಬದಿಯ ಬಡಾವಣೆಯಲ್ಲಿನ ಆಪೇಕ್ಸ್ ಸ್ಕೂಲ್ ಹಿಂಬದಿಯ ಪುರಸಭೆ ಗಾರ್ಡ್ನ ನಿವೇಶನದಲ್ಲಿ ಪುರಸಭೆಯಿಂದ ನೀರಿನ ಟ್ಯಾಂಕ್ ಕಟ್ಟಲು ಜೆಸಿಬಿ ಯಂತ್ರದಿAದ ತಳಪಾಯ ಅಗೆಯುವಾಗ ಶಿವಲಿಂಗ ದೊರೆತ್ತಿದ್ದು, ಸುದ್ದಿ ಹರಡುತ್ತಿದ್ದಂತೆ ನೋಡಲು ಜನ ತಂಡೋಪ, ತಂಡವಾಗಿ ದೌಡಾಹಿಸಿ ವೀಕ್ಷಿಸಿ ದರ್ಶನ ಪಡೆದರು.

ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಸಹ ಭೇಟಿ ನೀಡಿ ಸ್ಥಳವನ್ನು ವೀಕ್ಷಿಸಿ ಪತ್ತೆಯಾದ ಶಿವಲಿಂಗದ ದರ್ಶನ ಕೈಗೊಂಡರು. ಇದೇ ವೇಳೆ ಪ್ರತಿಕ್ರಿಯೆಸಿದ ಗುತ್ತೇದಾರ ಅವರು, ಪುರಸಭೆ ನಿವೇಶನದಲ್ಲಿ ನೀರಿನ ಟ್ಯಾಂಕ್ ಕಟ್ಟಲು ಪಾಯ ಅಗೆಯುವಾಗ ಶಿವಲಿಂಗ ಪತ್ತೆಯಾಗಿದೆ ಎಂದರು.