ಸುದ್ದಿ ಕನ್ನಡ ವಾರ್ತೆ
ಶಿರಸಿ: ಹ್ಯಾಟ್ರಿಕ್ ಹೀರೋ, ಕರುನಾಡ ಕಣ್ಮಣಿ ಡಾ. ಶಿವರಾಜ ಕುಮಾರ ಅವರ ಆರೋಗ್ಯ ಕಾಳಜಿಗೆ, ಯೋಗಕ್ಷೇಮ ವಿಚಾರಣೆಗೆ ಅವರ ಹತ್ತಿರದ ಬಂಧು, ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ‌ ನಾಯ್ಕ ಅಮೇರಿಕಾಕ್ಕೆ ತೆರಳಿದ್ದಾರೆ.

ಜನವರಿ 24ರ ವರೆಗೆ ಡಾ| ಶಿವರಾಜ ಕುಮಾರ ಅವರ ಜೊತೆಗೆ ಭೀಮಣ್ಣ ಅವರೂ ಇದ್ದು ಕುಶಲೋಪಚಾರ ನೋಡಿಕೊಳ್ಳಲಿದ್ದಾರೆ. ಅಮೇರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಕೆಯಲ್ಲಿರುವ ಶಿವಣ್ಣ ಅವರ ಜೊತೆ ಈವರೆಗೆ ಅವರ ಭಾವ, ಶಿಕ್ಷಣ‌ ಸಚಿವ ಮಧು ಬಂಗಾರಪ್ಪ ಇದ್ದರು. ಈಗ ಭೀಮಣ್ಣ ಅವರ ಸರದಿಯಾಗಿದೆ.
ಈ‌ ಮಧ್ಯೆ ಕ್ಷೇತ್ರದಲ್ಲಿ ಆಗು ಹೋಗುವ ಪ್ರಸ್ತುತ ವಿದ್ಯಮಾನದ ಕುರಿತು ಶಾಸಕರು ನಿರಂತರ ಸಂಪರ್ಕದಲ್ಲಿಯೂ ಇದ್ದಾರೆ.