ಸುದ್ಧಿಕನ್ನಡ ವಾರ್ತೆ
ಉಡುಪಿ: 2024 ನೇಯ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ ಪ್ರಕಟವಾಗಿದ್ದು ಪಾರ್ವತಿ ಸುಬ್ಬ ಪ್ರಶಸ್ತಿಗೆ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ.
ತೆಂಕುತಿಟ್ಟಿನ ಪ್ರಸಿದ್ಧ ಹಿಮ್ಮೇಳವಾದಕರೂ ಯಕ್ಷಗಾನ ಗುರುಗಳೂ ಆದ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರು ಈ ವಿಶೇಷ ಪ್ರಶಸ್ತಿ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಪ್ರಸಕ್ತ ಸಾಲಿನ ಯಕ್ಷಗಾನ ಅಕಾಡಮಿಯ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತನಿಧಿ ಪ್ರಶಸ್ತಿಗೆ ಯಕ್ಷಗಾನ ಕಲಾವಿದರೂ ಹಾಗೂ ವಿದ್ವಾಂಸರ ಹೆಸರನ್ನು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಕಟಿಸಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಫೆ 16 ರಂದು ಉಡುಪಿಯ ಕಲಾ ರಂಗಮಂದಿರದ ಸಭಾಗೃಹದಲ್ಲಿ ನಡೆಯಲಿದೆ.