ಸುದ್ದಿ ಕನ್ನಡ ವಾರ್ತೆ
ಕೆರೂರ : ಎಕರೆ ಜಮೀನಿಗಾಗಿ ನೂರು ಎಕರೆ ಜಮೀನು ಹೊಂದಿದ ಜಮೀನ್ದಾರನನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿದ ಘಟನೆ ಸಮೀಪದ ಹೊಸಕೋಟಿ ಗ್ರಾಮದಲ್ಲಿ ನೆಡೆದಿದೆ.

ಹೊಸಕೋಟಿಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಲಾಗಿದೆ. ಬಸನಗೌಡ ಬಾಲನಗೌಡ ಪಾಟೀಲ್ (75) ಕೊಲೆಯಾದ ವ್ಯಕ್ತಿ.

ಕಾಡರಕೊಪ್ಪ ಗ್ರಾಮದ ನಿಂಗಪ್ಪ ಹಿರಕನ್ನವರ (ವಾಲಿಕಾರ) ಲಕ್ಷ್ಮಪ್ಪ ಹಿರಕನ್ನವರ, ಬಾಲಪ್ಪ ಹಿರಕನ್ನವರ
ಮತ್ತು ಬಸನಗೌಡ ಪಾಟೀಲ ಕುಟುಂಬದ ಮಧ್ಯೆ 6 ಎಕರೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ.ನಿಂಗಪ್ಪ,ಲಕ್ಷ್ಮಪ್,ಬಾಲಪ್ಪ ಮೂರು ಜನ ಸಹೋದರರು ಸೇರಿ ಬಸನಗೌಡಗೆ ಕಲ್ಲಿನಿಂದ ತಲೆಗೆ ಚಚ್ಚಿ ಹಲ್ಲೆ ಮಾಡಿದ್ದಾರೆ.ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಬಸನಗೌಡ ಜಮೀನಿನಲ್ಲಿ ಮೃತಪಟ್ಟಿದ್ದಾರೆ.ಕೊಲೆ ಮಾಡಿದ ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಭೀಮಪ್ಪ ರಬಕವಿ ತನಿಖೆ ಮುಂದುವರಿಸಿದ್ದಾರೆ.