Banner Ad

ಸುದ್ದಿ ಕನ್ನಡ ವಾರ್ತೆ

ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

Banner Ad

ಉಪ ಪ್ರಾಂಶುಪಾಲರಾದ ಆರ್ ನಂಜುಂಡಯ್ಯ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನ ಜಾರಿಗೆ ತರುವ ಮೂಲಕ ದೇಶದ ಐಕ್ಯತೆಗೆ ದೇಶದ ಅಭಿವೃದ್ಧಿ ಪಥದಲ್ಲಿದೆ ಈ ದಿನವು ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ನಮ್ಮ ಮಹಾನ್ ನಾಯಕರ ದೂರದೃಷ್ಟಿಯನ್ನು ನೆನಪಿಸುತ್ತದೆ .ನಾವು ಯಾವಾಗಲೂ ಏಕತೆ, ಸಮಾನತೆ ಮತ್ತು ನಮ್ಮ ರಾಷ್ಟ್ರದ ಗೌರವದ ಮೌಲ್ಯಗಳನ್ನು ಅನುಸರಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ,ಭಾರತದ ಪ್ರಗತಿಗಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡೋಣ ಎಂದು ತಿಳಿಸಿ ಗಣರಾಜ್ಯೋತ್ಸವದ ಶುಭಾಶಯಗಳನು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಆರ್ ನಂಜುಂಡಯ್ಯ, ಪ್ರಾಂಶುಪಾಲರಾದ ಎಂ. ಕುಮಾರಸ್ವಾಮಿ, ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು , ಶಿಕ್ಷಕಿಯರು , ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿಗಳು, ಅಡುಗೆ ಸಹಾಯಕರು ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಜರಿದ್ದರು..
ವರದಿ.
ಎಸ್. ಪುಟ್ಟಸ್ವಾಮಿಹೊನ್ನೂರು
ಚಾಮರಾಜನಗರ ಜಿಲ್ಲೆ

Banner Ad