ಸುದ್ದಿ ಕನ್ನಡ ವಾರ್ತೆ

ಕೊಲ್ಹಾರ: ಪಟ್ಟಣದ ಶಿವಾಜಿ ವೃತ್ತದಲ್ಲಿರುವ ಮಂಜುನಾಥ ಸಗರೆಪ್ಪ ಮುರನಾಳ ಮಾಲಿಕನಿಗೆ ಸೇರಿದ ಟಿವಿಎಸ್ ಶೋರೂಂಗೆ ಗುರುವಾರ ಸಂಜೆ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಬೆಲೆ ಬಾಳುವ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.

ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಶೋರೂಂ ಬೆಂಕಿ ಆವರಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ಶೋರಂ ಹೊತ್ತಿ ಉರಿಯುತ್ತಿರುವುದನ್ನು ಕಂಡ, ಶಿವಾಜಿ ವೃತ್ತದ ಸುತ್ತಮುತ್ತಲಿನ ಯುವಕರು ಶೋರೂಂ ಶಟರ್ ಮುರಿದು ಜಿವ ಪಣಕ್ಕಿಟ್ಟು ಹರಸಾಹಸದಿಂದ ಅಂದಾಜು ಬೈಕುಗಳನ್ನು ಹೊರ ತೆಗೆದಿದ್ದಾರೆ. ಇದರಲ್ಲಿ ಎರಡು ಸುಪರ್ ಎಕ್ಸೆಲ್ ಬೈಕಗಳು ಮಾತ್ರ ಸಣ್ಣಪುಟ್ಟ ಬೆಂಕಿ ತಗುಲಿ ಹಾನಿಗಿಡಾಗಿವೆ. ಉಳಿದಂತೆ ಶೋರೂಂನಲ್ಲಿದ್ದ ಬೈಕಗೆ ಸಂಬಂಧಪಟ್ಟ ಸರಕು ಸಾಮಗ್ರಿಗಳು ಸೇರಿದಂತೆ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಪಾರ ಪ್ರಮಾಣದ ಬೆಲೆ ಬೈಕುಗಳನ್ನು ಹೊರ ತೆಗೆದ ಯುವಕರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರವೇ ಮುಖಂಡ ರವಿ ಗೊಳಸಂಗಿ ಆಕ್ರೋಶ

ಕೊಲ್ಹಾರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಈ ತರಹದ ಅಗ್ನಿ ಅವಘಡಗಳು ಸಂಭವಿಸಿದಾಗ ಪ್ರಾಣಹಾನಿ ಮತ್ತು ಆಸ್ತಿಗಳ ಹಾನಿಗಳಾಗಿವೆ.
ಕೂಡಲೇ ಕೊಲ್ಹಾರ ತಾಲೂಕು ಕೇಂದ್ರಕ್ಕೆ ಈ ಭಾಗದ ಶಾಸಕರು ಸಚಿವರು ಆಗಿರುವಂತಹ ಶಿವಾನಂದ ಪಾಟೀಲವರು ಅಗ್ನಿಶಾಮಕ ಠಾಣೆ ಸ್ಥಾಪನೆ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಕೊಲ್ಹಾರ ಪಿಎಸ್ಐ ಎಸ್.ಸಿ. ಗುರಬೆಟ್ಟ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಶಿವಾಜಿ ವೃತ್ತದ ಸುತ್ತುಮುತ್ತಲಿನ ಜನರು ಬೆಂಕಿ ನಂದಿಸುವ ಸಂದರ್ಭದಲ್ಲಿ ಅಭಿಲಾಷ ಕೊಲಕಾರ, ಪಪಂ ಸದಸ್ಯ ನಿಂಗಪ್ಪ ಗಣಿ, ರಾಘವೆಂದ್ರ ಕಂಬಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಕೊಲ್ಹಾರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.