ಸುದ್ದಿ ಕನ್ನಡ ವಾರ್ತೆ
ಆನಂದಪುರ :- ನಿಂತಿದ್ದ ಕಾರಿಗೆ  ಇನ್ನೊಂದು  ಕಾರು  ಡಿಕ್ಕಿ ಹೊಡೆದ ಪರಿಣಾಮ  ಕಾರ್ ಪಲ್ಟಿಯಾದ ಘಟನೆ ಆನಂದಪುರ ಪೊಲೀಸ್ ಸ್ಟೇಷನ್ ಮುಂಭಾಗ ಬುಧವಾರ ಮಧ್ಯಾಹ್ನ  ನಡೆದಿದೆ.

ಶಿವಮೊಗ್ಗದಿಂದ ಸಾಗರ ಕಡೆಗೆ   ಗಂಡ ಹೆಂಡತಿ ಇಬ್ಬರೂ ಮಕ್ಕಳು ಕಾರಿನಲ್ಲಿ  ತೆರಳುತ್ತಿದ್ದು ಕಾರ್ ಚಾಲಕ ಮೂತ್ರ ವಿಸರ್ಜನೆ ಮಾಡಲು ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ ಇಳಿಯುತ್ತಿರುವ ಸಮಯದಲ್ಲಿ ಸಾಗರ ಕಡೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರು ನಿಂತ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ    ಕಾರು  ಪಲ್ಟಿಯಾಗಿದೆ. ಪಲ್ಟಿಯಾದ ಕಾರನಲ್ಲಿನ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಫೋಟೋ 27 ಎ, ಎನ್, ಪಿ 1 ಆನಂದಪುರ ಪೊಲೀಸ್ ಠಾಣೆಯ ಮುಂಭಾಗ ನಿಂತಿದ್ದ ಕಾರಿಗೆ  ಇನ್ನೊಂದು ಕಾರ್ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ.