ಸುದ್ದಿ ಕನ್ನಡ ವಾರ್ತೆ

ಆನಂದಪುರ :-  ಚಾಲಕನ ನಿಯಂತ್ರಣ ತಪ್ಪಿದ ಬಸ್ ಹಲವರಿಗೆ ಗಾಯ..
ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಿಗೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ಸು  ಆನಂದಪುರ ಸಮೀಪದ ಹೊಸಗುಂದ  ಕ್ರಾಸ್ ನಲ್ಲಿ ಧರೆಗೆ ಡಿಕ್ಕಿ ಹೊಡೆದು ಹಲವರಿಗೆ ಗಾಯವಾದ ಘಟನೆ ಗುರುವಾರ ರಾತ್ರಿ ನಡೆದಿದೆ.

15ಕ್ಕೂ ಹೆಚ್ಚು ಪ್ರಯಾಣಿಕರು  ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದು ಕೆಲವರಿಗೆ ತೀವ್ರವಾದ ಗಾಯವಾಗಿದ್ದು ಅವರನ್ನು  ಶಿವಮೊಗ್ಗ ಆಸ್ಪತ್ರೆಗೆ, ಸಣ್ಣ ಪುಟ್ಟ ಗಾಯವಾದವರನ್ನು ಆನಂದಪುರ ಮತ್ತು ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಈ ಈ ಪ್ರಕರಣ ಆನಂದಪುರ  ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.