ಸುದ್ದಿ ಕನ್ನಡ ವಾರ್ತೆ
ಹಿರೇಬಾಗೇವಾಡಿ:ಗ್ರಾಮದ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಅಪ್ಪಟ ಬಸವ ಅಭಿಮಾನಿ, ಉದಯೋನ್ಮುಖ ಕವಿ, ಬರಹಗಾರ,ಸಮಾಜ ಸೇವಕ, ಸಂಘಟಕ ಹಾಗೂ ಕನ್ನಡದ ಕಟ್ಟಾಳು ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಯಲ್ಲಪ್ಪ ಕೊಂಡಗುರಿ ಅವರು ನವೆಂಬರ 23 ರಂದು ಬೆಂಗಳೂರು ಕೇಂದ್ರ ಬಸವ ಸಮಿತಿಯಿಂದ ಬೈಲಹೊಂಗಲದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ ಎಂದು
ರಾಜ್ಯ ಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರಾದ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ತಿಳಿಸಿದ್ದಾರೆ.
