ಸುದ್ದಿ ಕನ್ನಡ ವಾರ್ತೆ

ಮಂಗಳೂರು:ಸಮಾಜದಲ್ಲಿ ವಕೀಲ ವೃತ್ತಿ ಅತ್ಯಂತ ಮಹತ್ವದ್ದಾಗಿದೆ, ಕೌಟುಂಬಿಕ, ವ್ಯಾವಹಾರಿಕ, ಈಗ ಧಾರ್ಮಿಕ ವಿಷಯಗಳು ಸೇರಿದಂತೆ ಅನೇಕ ವಿಷಯಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಕಾನೂನಾತ್ಮಕ ಉಪಾಯ ತೆಗೆಯಲು ವಕೀಲರ ಪಾತ್ರ ಮಹತ್ವದ್ದಾಗಿದೆ. ಆದರೆ ಇಂತಹ ವಕೀಲರ ಕ್ಷೇತ್ರದಲ್ಲಿ ಈಗ ಪ್ರಾಮಾಣಿಕ ಮತ್ತು ಸತ್ಯದ ಪರವಾಗಿ ವಾದ ಮಂಡಿಸುವ ವಕೀಲರ ಸಂಖ್ಯೆ ವಿರಳವಾಗಿದೆ. ಸದ್ಯ ಹೆಚ್ಚಿನವರು ಸ್ವಂತದ ಸ್ವಾರ್ಥ ಮತ್ತು ಹಣ ಗಳಿಸುವ ಕಡೆಯೇ ತಮ್ಮ ಪ್ರಯತ್ನಗಳನ್ನು ಮಾಡುತ್ತಾರೆ. ಇದರ ಮುಂದಿನ ಭಾಗವಾಗಿ ಅವರು ತಮ್ಮ ಜೀವನವನ್ನೂ ಧಾವಂತದಲ್ಲಿ ಮತ್ತು ಒತ್ತಡದಲ್ಲಿ ಕಳೆಯುತ್ತಿರುತ್ತಾರೆ. ಇಂತಹ ಜೀವನ ಪದ್ಧತಿಯಿಂದ ಹೊರಬಂದು ಆನಂದಮಯ ಜೀವನ ಪದ್ಧತಿ ನಡೆಸಲು ಮತ್ತು ವಕೀಲ ವೃತ್ತಿಯ ಜೊತೆ ಜೊತೆಗೆ ರಾಷ್ಟ್ರಕಾರ್ಯದಲ್ಲಿ ತಮ್ಮ ಹೆಚ್ಚಿನ ಯೋಗದಾನವನ್ನು ಹೇಗೆ ನೀಡಬೇಕೆಂಬ ಮಾರ್ಗದರ್ಶನ ನೀಡಲು ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ 4 ಮತ್ತು 5 ಅಕ್ಟೋಬರ 2025 ರಂದು ರಾಷ್ಟ್ರಭಕ್ತ ನ್ಯಾಯವಾದಿಗಳ ಕಾರ್ಯಗಾರದ ಆಯೋಜನೆ ಮಾಡಲಾಯಿತು. ಈ ಕಾರ್ಯಗಾರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಸೇರಿದಂತೆ ರಾಜ್ಯದ ಹಲವು ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುವ ವಕೀಲರು ಸಹಭಾಗ ಮಾಡಿದ್ದರು.

ವಕೀಲರೆಂದರೆ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಸಮಾಜ ಶಾಸ್ತ್ರಜ್ಞರು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ*
ಕಾರ್ಯಗಾರದ ಪ್ರಸ್ತಾವನೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಮಾತನಾಡಿ, ವೃತ್ತಿ ಜೀವನ ವನ್ನು ಸಮತೋಲಿತಗೊಳಿಸುವುದು ಮತ್ತು ಒತ್ತಡಮುಕ್ತ ಜೀವನ ನಡೆಸಲು ಆಧ್ಯಾತ್ಮಿಕ ಸಾಧನೆ ಮುಖ್ಯವಾಗಿದೆ. ಎಲ್ಲಕ್ಕಿಂತ ಶ್ರೇಷ್ಠ ಜ್ಞಾನ ಆತ್ಮಜ್ಞಾನವಾಗಿದೆ ಅಂತಹ ಆತ್ಮಜ್ಞಾನವು ಆಧ್ಯಾತ್ಮಿಕ ಸಾಧನೆಯಿಂದ ಸಿಗಲಿದೆ. ನಾವು ವಕೀಲರಾಗಿ ಕುಕರ್ಮಗಳಲಲ್ಲಿ ಭಾಗಿಯಾದರೆ ಅದರ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ಸತ್ಯನಿಷ್ಠ ಮತ್ತು ಯೋಗ್ಯ ಕಾರ್ಯಗಳಲ್ಲಿ ತೊಡಗಬೇಕು. ಸದ್ಯ ಹಿಂದೂ ಧರ್ಮದ ಮೇಲೆ ಅನೇಕ ರೀತಿಯ ಆಘಾತಗಳಾಗುತ್ತಿದ್ದು ಅದನ್ನು ಕಾನೂನಾತ್ಮಕವಾಗಿ ಎದುರಿಸಿ ನ್ಯಾಯ ಒದಗಿಸಲು ನಾವು ಕೃತಿಶೀಲರಾಗಬೇಕು. ಈ ರೀತಿಯ ಧರ್ಮಕಾರ್ಯಕ್ಕಾಗಿ ನಾವು ಸಮಯ ತೆಗೆದು ಪ್ರಯತ್ನಿಸಬೇಕು, ನಮ್ಮೆಲ್ಲರ ಸಂಘಟಿತ ಪ್ರಯತ್ನದಿಂದ ಭಾರತದಲ್ಲಿ ಪುನಃ ಉತ್ತಮ ನ್ಯಾಯವ್ಯವಸ್ಥೆಯನ್ನು ಸ್ಥಾಪಿಸಲು ನಾವೆಲ್ಲರೂ ಪ್ರಯತ್ನಿಸಬೇಕಿದೆ. ದ್ವಾಪರಯುಗದಲ್ಲಿಯೂ ಕೌರವರ ಸಂಖ್ಯೆ ಹೆಚ್ಚಿದ್ದರೂ ಧರ್ಮದ ಪಕ್ಷದಲ್ಲಿದ್ದ ಪಾಂಡವರು ವಿಜಯಿಯಾದರು. ಹಾಗೆಯೇ ನಾವು ಸಹ ಧರ್ಮನಿಷ್ಠರಾಗಿ ಉತ್ತಮ ಸಮಾಜ ನಿರ್ಮಾಣದ ಕಾರ್ಯ ಮಾಡೋಣ ಎಂದು ಕರೆ ನೀಡಿದರು.