ಸುದ್ದಿ ಕನ್ನಡ ವಾರ್ತೆ
ಮಸ್ಕಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಹಡಗಲಿ ಗ್ರಾಮದ ರಸ್ತೆ ಕೆಸರು ಗದ್ದೆಯಂತಾಗಿದೆ. ತಲೆಖಾನ ಗ್ರಾಪಂ ವ್ಯಾಪ್ತಿಯ ಹಡಗಲಿ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ಮಳೆ ಸುರಿದರೆ ಕೆಸರುಮಯವಾಗಲಿದೆ. ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗಿದೆ.
ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ., ಪಟ್ಟಣದ ದೇವಸ್ಥಾನ, ಪ್ರಮುಖ ಬಡಾವಣೆಗೆ ತೆರಳಲು ಪಾದಚಾರಿಗಳಿಗೆ ತ್ರಾಸದಾಯಕವಾಗಿದೆ. ಸ್ಥಳೀಯರು ಅಧಿಕಾರಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ರಸ್ತೆ ದುರಸ್ತಿ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆಗಾಲ ಬಂದರೆ ಸಾಕು ಮಸ್ಕಿ ತಾಲೂಕಿನ ಹಡಗಲಿ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ, ರಸ್ತೆ ದುರಸ್ತಿ ಪಡಿಸುವಂತೆ ಅನೇಕ ಭಾರಿ ಅಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಅಧಿಕಾರಿಗಳು , ಜನಪ್ರತಿನಿಧಿಗಳು ಎಚ್ಚೇತ್ತುಕೊಂಡು ಶೀಘ್ರದಲ್ಲೇ ರಸ್ತೆ ದುರಸ್ತಿಪಡಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.
—-ಮಂಜುನಾಥ ವಿಟ್ಲಾಪುರ, ಹಡಗಲಿ ಗ್ರಾಮದ ನಿವಾಸಿ.