ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ-ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ನಿಮಿತ್ತ ಬೈಲಹೊಂಗಲ ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಭವನದಲ್ಲಿ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಬೈಲಹೊಂಗಲ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೃತ್ಯುಂಜಯ ಬ. ಚಿನಗುಡಿ, ವಿಸ್ತೀರ್ಣಾಧಿಕಾರಿ ಮಂಜುನಾಥ ಕರಿಸಿರಿ, ರಾಷ್ಟ್ರೀಯ ಬಸವದಳದ ಬೈಲಹೊಂಗಲ ಘಟಕದ ಪ್ರಧಾನ ಕಾರ್ಯದರ್ಶಿ ಈರಪ್ಪ ಸೋಮಪ್ಪ ಸನಮನಿ, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮೇಲ್ವಿಚಾರಕರಾದ ದೇಮಪ್ಪ ಪಾಂಡಪ್ಪ ಹಜೇರಿ ಗೌರವ ಸಲ್ಲಿಸಿದರು.
ಡಿ.ದೇವರಾಜ ಅರಸು ಅವರಿಗೆ ಗೌರವ ಅರ್ಪಿಸಿದ ಗಣ್ಯರು
