ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಪಂದ್ಯಕ್ಕೆ ಇದೀಗ ತಾಲೂಕಿನ ನಿತಿನ್ ಆಯ್ಕೆ ಆಗಿದ್ದು ಹುಬ್ಬಳ್ಳಿ ತಂಡಕ್ಕೆ ಅಡಲಿದ್ದಾರೆ.

ನಿತಿನ್ ಅವರು ಮೂಲತ ತಾಲೂಕಿನ ಆರಗ ಮೂಲದ ಶಾಂತವೇರಿಯವರು.

ತಂದೆ ನಾಗರಾಜ , ತಾಯಿ ಗಾಯತ್ರಿ, ಸಹೋದರಿ ನೇಹಾ.
ತೀರ್ಥಹಳ್ಳಿಯ ಅಬ್ದುಲ್ ಕಲಾಂ ಅವರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಆರಗ ಶಾಂತವೇರಿ ಗ್ರಾಮದ ನಿತಿನ್ ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಆಯ್ಕೆ ಆಗಿರುವುದು ಇದೀಗ ತೀರ್ಥಹಳ್ಳಿಯ ಹಾಗೂ ಮಲೆನಾಡ ಜನರಿಗೆ ಹೆಮ್ಮೆಯ ವಿಷಯವಾಗಿದೆ.
ನಿತಿನ್ ಮೊದಲು ಕ್ರಿಕೆಟ್ ಆರಂಬಿಸಿದ್ದು ನ್ಯಾಷನಲ್ ಸಂಸ್ಥೆಯ ಅಬ್ದುಲ್ ಕಲಾಂ ಅವರ ತೀರ್ಥಹಳ್ಳಿಯ ಬಾಳೆಬೈಲಿನ ಸಿಟಿ ಕ್ಲಬ್ ಅಲ್ಲಿ. ಇಲ್ಲಿ ಈತನಿಗೆ ಲೆದರ್ ಆಡುವ ಅವಕಾಶ ಕಲ್ಪಿಸಿತು, ನಂತರ ಬೆಂಗಳೂರಿನಲ್ಲಿ ಇವನ ಬೌಲಿಂಗ್‌ ಮಾಡೋ ರೀತಿ ನೋಡಿ ಅಭಿಮನ್ಯು ಮಿಥುನ್ ಅವರ ತಮ್ಮ ರನ್ ಅಪ್ ಅಕಾಡೆಮಿ ಯಲ್ಲಿ ಉಚಿತ ಕೋಚ್ ಜೀಮ್ ಬೇಕಾದ ಪ್ರೋಟಿನ್ ಗಳನ್ನು ಒದಗಿಸುವುದರ ಮೂಲಕ ಕೈ ಹಿಡಿಯುತ್ತಾರೆ. ಕಠಿಣ ತರಬೇತಿ ಬಳಿಕ ಈಗಾಗಲೇ 140 ಸ್ಪೀಡ್ ನಲ್ಲಿ ಬಾಲ್ ಎಸೆಯುವ ಸಾಮರ್ಥ್ಯ ಇರುವ ನಿತಿನ್ ಅವರನ್ನು ಹುಬ್ಬಳ್ಳಿ ಟೈಗರ್ಸ್ ಗುರುತಿಸಿ 25 ಲಕ್ಷಕ್ಕೆ ಬಿಡ್ ಮಾಡಿದೆ.

6.3 ಎತ್ತರದ ನೀಳಕಾಯದ ಈ ಯುವಕನಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಎಲ್ಲಾ ಅರ್ಹತೆ ಇದೆ.
ನಿತಿನ್ ಅವರನ್ನು ಕಳೆದ ಬಾರಿಯ ಕೆಪಿಎಲ್ ವಿನ್ನಿಂಗ್ ತಂಡ ವಾದ ಹುಬ್ಬಳ್ಳಿ ಟೈಗರ್ಸ್ ಬಿಡ್ ಮಾಡಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಅತ್ಯುತ್ತಮ ಕ್ರಿಕೆಟ್ ಕ್ರೀಡಾ ಪಟುವಾಗಿರುವ ನಿತಿನ್ ಕೆಪಿಎಲ್ ನಲ್ಲಿ ಚೆನ್ನಾಗಿ ಆಟವಾಡಿದರೆ ಐಪಿಎಲ್ ಕದ ತಟ್ಟುವ ಸಾಧ್ಯತೆ ಕೂಡ ಹೆಚ್ಚಿದೆ.ಈತನ ಸಾದನೆಯನ್ನು ಪೋಷಕರು,ಸ್ನೇಹಿತರು, ಅಭಿಮಾನಿಗಳು, ಪಟ್ಟಣದ ಸಾರ್ವಜನಿಕರು ಪ್ರಶಂಶಿಸಿ ಶುಭ ಕೋರಿದ್ದಾರೆ.