ಸುದ್ದಿ ಕನ್ನಡ ವಾರ್ತೆ
ಮಹಾರಾಷ್ಟçದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಸಮೀಪದ ಕೃಷ್ಣಾನದಿ ತುಂಬಿ ಹರಿಯುತ್ತಿದ್ದು, ಸಮೀಪದ ಹಿಪ್ಪರಗಿ ಬ್ಯಾರೇಜ್‌ಗೆ ಭಾನುವಾರ ೧೦೮೦೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಬಂದಷ್ಟೇ ಪ್ರಮಾಣದಲ್ಲಿ ನೀರನ್ನು ಮುಂಬಾಗಕ್ಕೆ ಬೀಡಲಾಗುತ್ತಿದೆ.
ಮಹಾರಾಷ್ಟçದ ರಾಜಾಪೂರ ಜಲಾಶಯದಿಂದ ನೀರು ಭಾರಿ ಮಟ್ಟದಲ್ಲಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಕಳೆದ ಕೆಲವು ದಿನಗಳಿಂದ ಉತ್ತಮ ಪ್ರಮಾಣದ ನೀರು ಹರಿದು ಬಂದಿದೆ. ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಳವಾಗುತ್ತಾ ನಡೆದಿದೆ.
ಮಹಾರಾಷ್ಟçದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ ೧೦೪ ಮಿ.ಮೀ., ನೌಜಾ ೧೧೫ ಮಿ.ಮೀ., ವಾರಣಾ ೭೨ ಮಿ.ಮೀ., ರಾಧಾನಗರಿ ೮೩ ಮಿ.ಮೀ., ದೂಧಗಂಗಾ ೫೪ ಮಿ.ಮೀ. ಮಳೆಯಾಗಿರುವುದರಿಂದ ಹಿಪ್ಪರಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರೀದು ಬರುತ್ತಿದೆ. ಇಂದು ಭಾನುವಾರ ಹಿಪ್ಪರಗಿ ಜಲಾಶಯಕ್ಕೆ ಒಟ್ಟು ೧೦೮೦೦೦ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ೧೦೭೨೫೦ ಕ್ಯೂಸೆಕ್ಸ್ ನೀರನ್ನು ಮುಂದೆ ಹರಿ ಬೀಡಲಾಗುತ್ತಿದೆ. ೬ ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜ್ ನೀರಿನ ಮಟ್ಟ ೫೨೨.೦೨ ಮೀ. ಇದೆ ಎಂದು ಜಮಖಂಡಿ ವಲಯದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.