ಸುದ್ದಿ ಕನ್ನಡ ವಾರ್ತೆ
ಶಾಪಿಂಗ್ ಮಾಡುವಾದ ತಿಳಿಯದೆ ಬಾಯಲ್ಲಿಟ್ಟುಕೊಂಡಿದ್ದ ಬಟ್ಟೆ ಪಿನ್’ವೊಂದು ಮಹಿಳೆಯ ಶ್ವಾಸಕೋಶ ಸೇರಿದ್ದು, ಒಂದು ತಿಂಗಳ ಕಾಲ ಉಸಿರಾಟದ ಸಮಸ್ಯೆ ಎದುರಿಸಿದ ಮಹಿಳೆಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಆತಂಕಕಾರಿ ಘಟನೆ ನಡೆದಿದೆ.
55 ವರ್ಷದ ಮಹಿಳೆ ಅಂಗಡಿಯಲ್ಲಿ ಬಟ್ಟೆ ಶಾಪಿಂಗ್ ಮಾಡವಾಗ ಮಹಿಳೆ ಪಿನ್ ಅನ್ನು ತನ್ನ ಬಾಯಿಯಲ್ಲಿ ಇರಿಸಿಕೊಂಡಿದ್ದು, ಈ ವೇಲೆ ಸೀನುವಾರ ಪಿನ್, ಬಲ ಶ್ವಾಸಕೋಶದ ಬ್ರಾಂಕಸ್ ಇಂಟರ್ಮೀಡಿಯಸ್ ಎಂಬ ಭಾಗದಲ್ಲಿ ಸಿಲುಕಿಕೊಂಡಿದೆ.
ಇದಾದ ಕೆಲವು ವಾರಗಳಲ್ಲಿ ಮಹಿಳೆಗೆ ಒಣ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು ಕಾರಣ ತಿಳಿದುಬಂದಿಲ್ಲ.
ಬಳಿಕ ಆಸ್ಟರ್ CMI ವೈದ್ಯರು ಚೆಸ್ಟ್ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಸೇರಿದಂತೆ ವಿವರವಾದ ಸ್ಕ್ಯಾನ್‌ಗಳನ್ನು ಮಾಡಿಸಿದ್ದಾರೆ. ಈ ವೇಳೆ ಶ್ವಾಸಕೋಶದಲ್ಲಿ ಪಿನ್ ಸಿಲುಕಿಕೊಂಡಿರುವುದು ಕಂಡು ಬಂದಿದೆ.
ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಪ್ರಮುಖ ಸಲಹೆಗಾರ ಡಾ. ಸುನಿಲ್ ಕುಮಾರ್ ಕೆ, ಪಿನ್ ಅವರು ಮಾತನಾಡಿ, ಪಿನ್’ನ ಚೂಪಾದ ತುದಿ ಶ್ವಾಸಕೋಶಕ್ಕೆ ಚುಚ್ಚಿಕೊಂಡಿದ್ದು, ಸಾಮಾನ್ಯ ಉಪಕರಣಗಳೊಂದಿಗೆ ಅದನ್ನು ತೆಗೆದುಹಾಕುವುದು ಅಪಾಯಕಾರಿಯಾಗಿತ್ತು. ಆದ್ದರಿಂದ, ಫೋಗಾರ್ಟಿ ಬಲೂನ್ ಅನ್ನು ಬಳಸಿಕೊಂಡು ನಿಧಾನವಾಗಿ ಹೊರತೆಗೆದು ನಂತರ ವಿಶೇಷ ಫೋರ್ಸ್‌ಪ್ಸ್ ಬಳಸಿ ಹೊರತೆಗೆಯಲಾಯಿತು. ಇದೆಲ್ಲವನ್ನೂ ರೋಗಿಯು ನಿದ್ರಾ ಸ್ಥಿತಿಯಲ್ಲಿದ್ದಾಗಲೇ ನಡೆಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.