ಸುದ್ದಿ ಕನ್ನಡ ವಾರ್ತೆ
ಪೋತ್ನಾಳ್: ಇಂದಿನ ದಿನಗಳಲ್ಲಿ ಕೃಷಿ ಹಾಗೂ ಕೃಷಿಗೆ ಸಂಬAಧಿಸಿದ
ಹೈನುಗಾರಿಕೆ ,ಜಾನುವಾರು ಸಾಕಾಣಿಕೆ ಸೇರಿದಂತೆ ಇತರ ಕೃಷಿ
ಚಟುವಟಿಕೆಗಳಿಂದ ರೈತಾಪಿ ಕುಟುಂಬದ ಯುವಕರೇ ದೂರ
ಸರಿಯುತ್ತಿರುವ ಸಮಯದಲ್ಲಿ ಎಂ.ಬಿ.ಎ. ಪದವೀಧರರೊಬ್ಬರು
ಯಶಸ್ಸಿಯಾಗಿ ಹೈನುಗಾರಿಕೆಯನ್ನು ಕೈಗೊಂಡು ಪ್ರತಿ ತಿಂಗಳು
ಲಕ್ಷಾAತರ ರೂ ಅದಾಯ ಪಡೆದು ಕೊಳ್ಳುತ್ತಿದ್ದಾರೆ.
ತಾಲೂಕಿನ ಹನುಂತರೆಡ್ಡಿ ಕ್ಯಾಂಪಿನಲ್ಲಿ ಪ್ರವೀಣ ರಾಜಲಬಂಡಿ ಎನ್ನುವ ಯುವಕ
ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಎಂ.ಬಿ.ಎ. ಮಾರ್ಕೆಟಿಂಗ್ ಪದವಿ ಪಡೆದು
ನಂತರ ಉದ್ಯೋಗಕ್ಕಾಗಿ ಮಹಾನಗರಗಳಲ್ಲಿ ಬೇರೆಯವರ
ಸಂಸ್ಥೆಯಲ್ಲಿ ಅಲ್ಪ ಮೋತ್ತಕ್ಕೆ ದುಡಿಯುವ ಬದಲು ಸ್ವಂತ
ಉದ್ದೀಮೆಯನ್ನು ಯಾಕೆ ಪ್ರಾರಂಭಿಸಬಾರದು ಎಂದು ಪ್ರಶ್ನಿಸಿಕೊಂಡು
ಹೈನುಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಇಂದು
ಪ್ರತಿ ತಿಂಗಳು ಲಕ್ಷಾಂತರ ಅದಾಯವನ್ನು ಗಳಿಸುವ ಮೂಲಕ ಇತರ
ಯುವಕರಿಗೆ ಸ್ಪೂರ್ತಿ ನೀಡುತ್ತ ಕಠಿಣ ಪರಿಶ್ರಮ ಒಂದಿದ್ದಾರೆ ಸಾಕು
ಯಾವ ಕ್ಷೇತ್ರದಲ್ಲಿಯಾದರು ಯಶಸ್ಸು ಪಡೆಯುವುದಕ್ಕೆ ಸಾಧ್ಯ
ಎಂದು ತೋರಿಸಿಕೊಟ್ಟಿದ್ದಾರೆ .

ಪ್ರಾರಂಭದಲ್ಲಿ ಪ್ರವೀಣ ರಾಜಲಬಂಡಿ ಯವರು 3 ವರ್ಷಗಳ ಕೇಳಗೆ ವಿವಿಧ
ಬ್ಯಾಂಕಿನಲ್ಲಿ ಹಣಕಾಸಿನ ನೆರವನ್ನು ಪಡೆದು ಹನುಂತರೆಡ್ಡಿ ಕ್ಯಾಂಪಿನಲ್ಲಿ 4
ಎಕರೆ ಜಮೀನು ಸಾಗುವಳಿಯಾಗಿ ಪಡೆದು ಅದರಲ್ಲಿ 10 ಲಕ್ಷ ವೆಚ್ಚದಲ್ಲಿ
ಎಮ್ಮೆಗಳಿಗಾಗಿ ಶೇಡ್ ನಿರ್ಮಿಸಿದ್ದಾರೆ. ಹಾಗೂ ಈ ಭಾಗದಲ್ಲಿ ಬಿಸಿಲು
ಹೆಚ್ಚಾಗಿರುವುದರಿಂದ ಶೇಡ್ ನಲ್ಲಿ ಗಾಳಿಗಾಗಿ ಹಾಕಿರುವ ಫ್ಯಾನ್ ಗಳಿಗೆ
ನಿರಂತರವಾಗಿ ವಿದ್ಯುತ್ ಪೂರೈಕೆಗಾಗಿ ಸೋಲಾರ್ ಘಟಕವನ್ನು
ಅಳವಡಿಸಿದ್ದರೆ. ಎಮ್ಮೆಗಳಿಗೆ ಆಹಾರವಾಗಿ ನೀಡುವುದಕ್ಕೆ ಪ್ರತಿ ದಿನ 8
ಕ್ವೀಂಟಾಲ್ ಹಸಿ ಮೇವು ಜೋತೆಗೆ ಒಣ ಭತ್ತದ ಹುಲ್ಲು, ಸಜ್ಜೆ,ಭತ್ತದ
ಹೊಟ್ಟು , ಮಿನರಲ್ ಮಿಕ್ಸರ್ ನೀಡಲಾಗುತ್ತದೆ. ಹಸಿರು ಮೇವಿಗಾಗಿ 4 ಎಕರೆ
ಜಮೀನಿನಲ್ಲಿ ಸೂಪರ್ ನೇಫಿಯರ್.ಬೂಲೇಟ್ ನೇಪಿಯರ್, ಸೇರಿದಂತೆ ಹಸಿರು
ಮೇವು ನೀಡುವ ತಳಿಗಳ ಮೇವಿನ ಬೆಳೆಗಳನ್ನು ಪ್ರತಿ ದಿನ
ಕೋಯ್ಲಿಗೆ ಬರುವಂತೆ ನಾಟಿ ಮಾಡಿರುವುದರಿಂದ ಪ್ರತಿದಿನ ಎಮ್ಮೆಗಳಿಗೆ
ಅಗತ್ಯವಿರುವ ಹಸಿರು ಮೇವು ನಿರಂತರವಾಗಿ ದೊರೆಯುತ್ತಿದೆ. ಹರಿಯಾಣ
ಸೇರಿದಂತೆ ಇತರ ಪ್ರದೇಶಗಳಲ್ಲಿ ಹೆಚ್ಚು ಹಾಲು ನೀಡುವ ಮುರಾ
ತಳಿಯ ಎಮ್ಮೆಗಳನ್ನು ಒಂದಕ್ಕೆ 1ಲಕ್ಷ 20 ಸಾವಿರದಂತೆ 24
ಎಮ್ಮೆಗಳನ್ನು ಹಾಗೂ ಒಂದು ಕೋಣವನ್ನು ಒಟ್ಟು 30 ಲಕ್ಷ ನೀಡಿ
ತಂದಿದ್ದಾರೆ,ನಿರAತರವಾಗಿ ಹಾಲಿನ ಇಳುವರಿ ಬರುವಂತೆ ನೋಡಿಕೊಂಡಿದ್ದಾರೆ.
ಅವುಗಳಲ್ಲಿ 10 ಎಮ್ಮೆಗಳು ಗರ್ಭಧರಿಸಿದ್ದು ,11 ಎಮ್ಮೆಗಳು ಕರು
ಹಾಕಿವೇ. ಒಂದು ಎಮ್ಮೆ ಒಂದು ದಿನಕ್ಕೆ 15 ಲೀಟರ್ ಸಾರಸಾರಿಯಲ್ಲಿ ಹಾಲು ನೀಡಿದರು
ಕೂಡ ಪ್ರತಿದಿನ 150 ಲೀಟರ್ ಹಾಲು ದೊರೆಯುತ್ತಿದೆ. ಪ್ರತಿದಿನ
ಮನೆಗಳವರಿಗೆ 90 ಲೀಟರ್ ಹಾಲು,30 ಲೀಟರ್ ಹಾಲನ್ನು ಹೋಟಲ್‌ಗಳಿಗೆ
ಚಾ.ಅಂಗಡಿಯವರಿಗೆ ಹೋಲ್‌ಸೆಲ್‌ನಲ್ಲಿ ನೀಡಲಾಗುತ್ತದೆ. ಉಳಿದ 30 ಲೀಟರ್ ಹಾಲಿ
ನಿಂದ ಉಪ ಉತ್ಪನ್ನವಾಗಿ ಮೋಸರು,ಪನ್ನಿರ್, ತಯಾರು ಮಾಡಿ ಹೋಟೆಲ್
ಮತ್ತು ಡಾಬಗಳಿಗೆ ಪೂರೈಕೆ ಮಾಡುತ್ತಾರೆ. ಹಾಲಿನಿಂದ ಬೆಣ್ಣೆಯನ್ನು
ಕೂಡ ತಯಾರು ಮಾಡಿ ಮಾರಾಟ ಮಾಡುತ್ತಾರೆ ಮೋದಲುಗ್ರಾಹಕರನ್ನು ಆಕರ್ಷಿಸುವುದಕ್ಕೆ ಇನ್ಸಾಟ್ರ ಗ್ರಾಂ,ಫೇಸ್ ಬುಕ್, ವಾಟ್ಸಾಫ್
ಗಳಂತಹ ಸಾಮಾಜಿಕ ಜಾಲತಾಣಗಳನ್ನು ಸಮಾರ್ಥವಾಗಿ ಬಳಸಿಕೊಂಡಿದ್ದಾರೆ.
ಕೋಟ್: ಹಾಲಿನ ಮಾರುಕಟ್ಟೆಯ ಮೇಲೆ ಹಿಡಿತವಿದಲ್ಲಿ ಮಾತ್ರ
ಹೈನುಗಾರಿಕೆಯಲ್ಲಿ ಯಶಸ್ಸು ಪಡೆಯುವುದಕ್ಕೆ ಸಾಧ್ಯವಾಗುತ್ತದೆ
ಪ್ರತಿ ಲೀಟರ್ ಹಾಲಿನಿಂದ ನಾವು ಹೆಚ್ಚು ಹೆಚ್ಚು ಅದಾಯ ಬರುವಂತೆ ನಾವು
ನೋಡಿಕೊಂಡಾಗ ಮಾತ್ರ ಲಾಭ ಪಡೆಯುವುದಕ್ಕೆ ಸಾಧ್ಯವಾಗುತ್ತದೆ,
ಪ್ರಾರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉಳಿಯುತ್ತಿದ್ದಿದ್ದರಿಂದ ನಷ್ಟ
ವಾಗುತಿತ್ತು ಆಗ ಮಾನ್ವಿಯಲ್ಲಿ ಸಂಸ್ಕರಣ ಘಟಕವನ್ನು 5 ಲಕ್ಷ ವೆಚ್ಚದಲ್ಲಿ
ಪ್ರಾರಂಭಿಸಿ ಈ ಘಟಕದಲ್ಲಿ ಖರ್ಚಗದೆ ಉಳಿದ ಹಾಲಿನಿಂದ ಮೋಸರು, ಪನ್ನೀರು,
ಹಾಗೂ ಬೆಣ್ಣೆ,ತುಪ್ಪ,ತಯಾರಿಕೆ ಪ್ರಾರಂಭಿಸಿದ ನಂತರ ಪ್ರತಿ ಲೀಟರ್ ಹಾಲಿಗೆ
75 ರೂ ನಿಂದ 90 ರೂ ವರೆಗೂ ಅದಾಯವನ್ನು ಪಡೆಯುವುದಕ್ಕೆ
ಸಾಧ್ಯವಾಯಿತು. ಪ್ರತಿ ಮನೆಯವರಿಗೆ ಹಾಲಿನ ಗುಣಮಟ್ಟದ ಖಾತ್ರಿಯ
ಜೋತೆಗೆ ಹಾಲಿನಲ್ಲಿ ಕಲಬರಕೆ ಹಾಗೂ ಗುಣಮಟ್ಟವನ್ನು ನಿರಂತರವಾಗಿ
ಗ್ರಾಹಕರೆ ಪರೀಕ್ಷೆ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುವಂತೆ
ಲ್ಯಾಕ್ಟೋ ಮೀಟರ್ ಹಾಗೂ ಕಲಬರಿಕೆ ಪತ್ತೆ ಮಾಡುವ ಕಿಟ್ ಅನ್ನು ಉಚಿತವಾಗಿ
ನೀಡಿದ ನಂತರ ಮನೆಗಳವರ ಹಾಗೂ ಗ್ರಾಹಕರ ವಿಶ್ವಾಸ
ಗಳಿಸುವುದಕ್ಕೆ ಸಾಧ್ಯವಾಯಿತು ಹಾಗೂ ಇಂದು ಪ್ರತಿ ದಿನ 90 ಲೀಟರ್ ವರೆಗೆ
ಹಾಲು ಮಾರಾಟ ಮಾಡುವುದಕ್ಕೆ ಸಾಧ್ಯವಾಗಿದೆ . ಕಲಬರೆಕೆ ಇಲ್ಲದ
ಶುಧ್ದವಾದ ಪನ್ನಿರ್‌ಗೆ ಮಾರುಕಟ್ಟೆಯಲ್ಲಿ ಪ್ರತಿ ಕೇಜಿಗೆ 450ರೂ,
ಬೆಣ್ಣೆಗೆ 600 ರೂ,ಮೇಸರಿಗೆ 80 ರೂ ದೋರೆಯುತ್ತಿದೆ .
35 ಲಕ್ಷ ರೂ 24 ಎಮ್ಮೆ ಖರೀದಿಗೆ, ಸೋಲಾರ್ ಘಟಕ ಅಳವಡಿಸುವುದಕ್ಕೆ 3
ಲಕ್ಷ, ಯಂತ್ರಗಳನ್ನು ಆಳವಡಿಸುವುದಕ್ಕೆ 5 ಲಕ್ಷ ಸೇರಿ ಒಟ್ಟು 43 ಲಕ್ಷ
ಬಂಡವಾಳ ಹೂಡಿಕೆ ಮಾಡಲಾಗಿದೆ,
ಪ್ರತಿ ತಿಂಗಳು ಡೈರಿ ಪಾರಂ ನಿರ್ವಹಣೆಗಾಗಿ 3 ಕೂಲಿ ಕಾರ್ಮಿಕರಿಗಾಗಿ ವೆಚ್ಚ
ಪ್ರತಿ ತಿಂಗಳಿಗೆ 60ಸಾವಿರ, ಪಶು ಆಹಾರಕ್ಕಾಗಿ 80 ಸಾವಿರ, ಎಮ್ಮೆಗಳಿಗೆ
ಗರ್ಭ ಧರಿಸುವುದಕ್ಕೆ ಆಗುವ ಚಿಕಿತ್ಸೆ ವೆಚ್ಚ ಹಾಗೂ ವೈದ್ಯಕೀಯ
ವೆಚ್ಚ ಸೇರಿ. ಹಸಿರು ಮೇವಿಗಾಗಿ 4 ಎಕರೆಗೆ ಪ್ರತಿ ತಿಂಗಳು ಸಾಗುವಳಿ
ವೆಚ್ಚವಾಗಿ 20 ಸಾವಿರ, ಬೆಳೆಯುವುದಕ್ಕೆ 20 ಸಾವಿರ ನೀಡಲಾಗುತ್ತಿದೆ. ಪ್ರತಿ
ತಿಂಗಳು 1ಲಕ್ಷ 80 ಸಾವಿರ ದಿಂದ 2 ಲಕ್ಷದವರೆಗೆ ಖರ್ಚು ಬರುತ್ತದೆ.
ಪ್ರತಿದಿನ ಉತ್ಪದನೆಯಾಗುವ 150 ಲೀಟರ್ ಹಾಲನ್ನು ಪ್ರತಿ ಲೀಟರ್‌ಗೆ 75 ರೂ
ನಂತೆ ನೀಡಿದರು ಕೂಡ ಒಂದು ದಿನಕ್ಕೆ 11,250 ರೂ ತಿಂಗಳಿಗೆ 3 ಲಕ್ಷ 37
ಸಾವಿರ ನೀಖರವಾದ ಅದಾಯ ದೊರೆಯುತ್ತಿದ್ದು ಖರ್ಚು 2ಲಕ್ಷ ಕಳೆದರು
ಕೂಡ ಪ್ರತಿ ತಿಂಗಳು 1 ಲಕ್ಷ 37 ಸಾವಿರ ದುಡಿಯುತ್ತಿದ್ದಾರೆ ಬ್ಯಾಂಕಿನ ಸಾಲ
ಮುಟ್ಟಿದ ನಂತರ ಪ್ರತಿ ತಿಂಗಳು ಅದಾಯ ಕೈ ಸೇರಲಿದೆ .ಮುರಾ
ಕೋಣಕ್ಕೂ ಕೂಡ ತಳಿ ಸಂವರ್ಧನೆಗಾಗಿ ಹೆಚ್ಚಿನ ಬೆಡಿಕೆ ಹಾಗೂ ಹಾಲಿಗಾಗಿ
ಹೆಣ್ಣು ಕರುಗಳಿಗೆ ಬೇಡಿಕೆ ಇರುವುದರಿಂದ ಗಂಡು ಮತ್ತು ಹೆಣ್ಣು
ಕರುಗಳನ್ನು ಬೆಳೆಸಿ ಮಾರಾಟ ಮಾಡುವುದರಿಂದಲ್ಲು ಕೂಡ ಲಕ್ಷಾಂತರ
ಅದಾಯವನ್ನು ಮುಂದಿನ ಎರಡು ವರ್ಷಗಳಲ್ಲಿ ಪಡೆಯುವುದಕ್ಕೆ
ಸಾಧ್ಯವಿದೆ ಹಾಗೂ ಎಮ್ಮೆ ಸೇಗಣಿಗೆ ಬಾರಿ ಬೇಡಿಕೆ ಇದೆ ಮುಂದಿನ ದಿನಗಳಲ್ಲಿ
ಎರೆಹುಳ ಗೋಬ್ಬರ ತಯಾರಿಕೆ ಘಟಕ ಪ್ರಾರಂಭಿಸಲಾಗುವುದು
ಎನ್ನುತ್ತಾರೆ ಹೈನೋಧÀ್ಯಮಿ ಪ್ರವೀಣ ರಾಜಲಬಂಡಿ .