ಸುದ್ದಿ ಕನ್ನಡ ವಾರ್ತೆ
ಗಂಗಾವತಿ:ಸೈನಿಕನ ಕಾರು ಕೇವಲ 17 ಸಾವಿರ ರೂ.ಗಳಿಗೆ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊರ್ವನಿಂದ ಆನ್‌ಲೈನ್ ಮೂಲಕ 70 ಸಾವಿರ ಪೀಕಿ ವಂಚನೆ ಮಾಡಿದ ಘಟನೆ ಗಂಗಾವತಿಯ ಎಚ್‌ಆರ್‌ಎಸ್ ಕಾಲೋನಿಯಲ್ಲಿ ಜರುಗಿದೆ.

ಗಂಗಾವತಿಯ ಎಚ್‌ಆರ್‌ಎಸ್ ಡಿಪೋ ಹತ್ತಿರದ ನಿವಾಸಿಯಾದ ನಾಗಮುನಿರೆಡ್ಡಿ ಎನ್ನುವವರನ್ನು ಆನ್‌ಲೈನ್ ಮೂಲಕ ಮೊಬೈಲ್ ಕರೆ ಮಾಡಿ ಸಂಪರ್ಕಿಸಿದ ವ್ಯಕ್ತಿಯೊರ್ವ(9350841941ಈ ನಂಬರ್ ನಿಂದ ಕರೆ ಮಾಡಿ) ನಿಮ್ಮ ನಂಬರ್ ಲಕ್ಕಿ ಡ್ರಾದಲ್ಲಿ ಮಾಜಿ ಸೈನಿಕನ ಕಾರನ್ನು ಗೆದ್ದಿದ್ದು ಕೂಡಲೇ ನಿಮ್ಮ ಊರಿಗೆ ಲಾರಿಯ ಮೂಲಕ ನಾಸಿಕ್ ನಿಂದ ಗಂಗಾವತಿಗೆ ಕಳಿಸಲು 17 ಸಾವಿರ ರೂ.ಗಳನ್ನು ಪೋನ್ ಪೇ ಗೆ ಹಾಕುವಂತೆ ಮೊಬೈಲ್ ನಿಂದ ವ್ಯಕ್ತಿಯೊಬ್ಬ ಕರೆ ಮಾಡಿ ಲಾರಿ ಬರುವ ಮಾರ್ಗದ ಲೋಕೇಶನ್ ಹಾಕಿದ್ದು ನಾಗಮುನಿರೆಡ್ಡಿ ಕೂಡಲೇ ಪೋನ್ ಪೇ ಹಣ ಹಾಕಿದ್ದಾರೆ. ನಂತರ ಇದರಂತೆ ಹಲವು ಭಾರಿ ವಿವಿಧ ಖರ್ಚು ವೆಚ್ಚಗಳ ಕಾರಣ ಹೇಳಿ 70 ಸಾವಿರ ರೂ.ಗಳನ್ನು ಅಪರಿಚಿತ ವ್ಯಕ್ತಿ ತನ್ನ ಪೋನ್ ಪೇ ಗೆ ಹಾಕಿಸಿಕೊಂಡಿದ್ದಾರೆ. ಜತೆಗೆ ಕಾರು ಇರುವ ಲಾರಿಯ ಲೋಕೇಶನ್ ಶೇರ್ ಮಾಡುತ್ತ ಹಣ ಪೀಕಿದ್ದಾನೆ. ಕೊನೆಗೆ ಸಾಲುಂಚಿಮರದ ಹತ್ತಿರ ಲಾರಿ ನಿಂತಿದೆ. ತಾವು ತೆರಳಿ ಕಾರು ಪಡೆಯುವಂತೆ ತಿಳಿಸಿದ್ದು ನಾಗಮುನಿರೆಡ್ಡಿ ಸಾಲುಂಚಿಮರದ ಹತ್ತಿರ ಹೋಗಿ ನೋಡಿದರೆ ಲಾರಿ ಇತ್ತು. ಆದರೆ ಹಲವು ದಿನಗಳಿಂದ ಈ ಲಾರಿ ಅಲ್ಲೇ ಇದ್ದು ಇದರಲ್ಲಿ ಕಾರು ಇರಲಿಲ್ಲ. ಇದರಿಂದ ಗೊಂದಲಕ್ಕೀಡಾದ ನಾಗಮುನಿರೆಡ್ಡಿ ಹಣ ಹಾಕಿಸಿಕೊಂಡ ವ್ಯಕ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಇಲ್ಲ ಆಡ್ರೆಸ್ ತಪ್ಪಾಗಿ ಬೇರೆ ಲಾರಿಯಲ್ಲಿ ಬೇರೆ ಊರಿಗೆ ಕಾರನ್ನು ಕಳಿಸಲಾಗಿದೆ. ಪುನಹ 25 ಸಾವಿರ ರೂ.ಗಳನ್ನು ಹಾಕುವಂತೆ ತಿಳಿಸಿದ್ದಾರೆ. ಇದರಿಂದ ಎಚ್ಚೆತ್ತ ನಾಗಮುನಿರೆಡ್ಡಿ ಕಾರಟಗಿ ಪೊಲೀಸ್ ಠಾಣೆಗೆ ತೆರಳಿ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸ್ ಮಾರ್ಗದರ್ಶನದಂತೆ 1930 ಗೆ ಕೇಸ್ ದಾಖಲಿಸಿದ್ದಾರೆ.

——
ಮಾಜಿ ಸೈನಿಕನೊರ್ವನ ಕಾರು ಕಡಿಮೆ ದರಕ್ಕೆ ಮಾರುವುದಾಗಿ ವ್ಯಕ್ತಿಯೊರ್ವ 9350841941 ಕರೆ ಮಾಡಿ ವಿಶ್ವಾಸ ಬರುವಂತೆ ಮಾಡಿದರು. ಸೈನಿಕರ ಬಗ್ಗೆ ಗೌರವ ಇರುವ ತಾವು ಕೂಡಲೇ ಅವರು ಹೇಳಿದಂತೆ ಒಟ್ಟು 70 ಸಾವಿರ ರೂ.ಗಳನ್ನು ಪೋನ್ ಪೇ ಗೆ ಹಾಕಿದ್ದು ಸಾಲುಂಚಿಮರ ಗ್ರಾಮದ ಲೋಕೇಶನ್ ನಲ್ಲಿ ಹೋಗಿ ಲಾರಿ ನೋಡಿದರೆ ಖಾಲಿಯಾಗಿತ್ತು. ನಾನು ಮೋಸ ಹೋಗಿರುವುದು ಗೊತ್ತಾಗಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಎಫ್‌ಐಆರ್ ಕಾಪಿ ತಂದು ಬ್ಯಾಂಕಿಗೆ ನೀಡಿದರೆ ಹಣ ವಂಚಕನ ಖಾತೆಗೆ ಮರಳಿ ಹಾಕುವ ಭರವಸೆಯನ್ನು ಬ್ಯಾಂಕ್ ನವರು ನೀಡಿದ್ದು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತದೆ.
-ನಾಗಮುನಿರೆಡ್ಡಿ ಸಾಣಾಪೂರ, ಗಂಗಾವತಿ ವಂಚನೆಗೊಳಗಾದ ವ್ಯಕ್ತಿ.