ಸುದ್ದಿ ಕನ್ನಡ ವಾರ್ತೆ

ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ಗುರುವಾರ ಸಂಜೆ ಸುರಿದ ಗಾಳಿ ಆನೆಕಲ್ಲು ಮಳೆ ಸಂದರ್ಭದಲ್ಲಿ ಶ್ರೀ ರಾಮನಗರದ ಮೂರನೇ ವಾರ್ಡಿನ ಮನೆಯೊಂದರ ಮುಂದೆ ಬೆಳೆದ ತೆಂಗಿನ ಮರಕ್ಕೆ ಸಿಡಿಲು ಹೊಡೆದು ಬೆಂಕಿ ಹತ್ತಿಕೊಂಡು ತೆಂಗಿನ ಗಿಡ ಸುಟ್ಟು ಭಸ್ಮವಾಗಿದೆ. ಅಕಾಲಿಕ ಮಳೆ ಜೊತೆಗೆ ಆಣೆಕಲ್ಲು ಗುಡುಗು, ಸಿಡಿಲು ಬಿದ್ದಿದ್ದು ಜನರು ಭಯಬೀತರಾಗಿದ್ದಾರೆ.

ತೆಂಗಿನ ಮರಕ್ಕೆ ಸಿಡಿಲು ಹೊಡೆದು ಬೆಂಕಿ ಹೊತ್ತಿಕೊಂಡಾಗ ಜನರು ನೀರು ಹಾಕಿ ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ.

ಈ ಅಕಾಲಿಕ ಮಳೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನೆಲಕ್ಕೆ ಉರುಳಿಸಿದೆ. ಇದರಿಂದ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆ ಬೆಳೆದ ರೈತರು ಅಪಾರ ನಷ್ಟಕ್ಕೆ ಈಡಾಗಿದ್ದಾರೆ. ಸ್ಥಳಕ್ಕೆ ಕಂದಾಯ ಕೃಷಿ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಘಟನೆಯನ್ನು ಪರಿಶೀಲ ನಡೆಸಿದರು