ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸೈಡ್ ಎಫೆಕ್ಟ್ ಜನರಿಗೆ ತಲುಪಿದ್ದು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ನಾಲ್ಕು ರೂಪಾಯಿ ದರ ಏರಿಕೆ ಮಾಡಿದ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಶಾಕ್ ಅನ್ನು ರಾಜ್ಯದ ಜನತೆಗೆ ಸರ್ಕಾರ ನೀಡಿದೆ.
ಈ ಕುರಿತಂತೆ ಕೆ ಇ ಆರ್ ಸಿ ಮಾಹಿತಿ ನೀಡಿದ್ದು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ವಿದ್ಯುತ್ತರವನ್ನು ಪ್ರತಿ ಯೂನಿಟ್ ಗೆ 36 ಮಾಡಿರುವುದಾಗಿ ತಿಳಿಸಿದೆ.
ಈ ಪರಿಷ್ಕೃತ ದರದ ಅನ್ವಯ 2025- 26ನೇ ಸಾಲಿನ ಎಲ್ ಟಿ ಗ್ರಾಹಕ ಪ್ರವರ್ಗಗಳಲ್ಲಿ ಗ್ರಹ ಬಳಕೆ ಬಳಸುವ ವಿದ್ಯುತ್ ಸ್ಥಿರ ಶುಲ್ಕ 145 ಗಳಾಗಿದ್ದು, ಬಳಕೆದರವು ಪ್ರತಿ ಯೂನಿಟ್ ಗೆ 580 ಪೈಸೆ ಆಗಿರುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಸ್ಥಿರ ಶುಲ್ಕ190 ರೂಗಳಾಗಿದ್ದು, ಬಳಕೆಯ ತರವು ಪ್ರತಿ ಯೂನಿಟ್ ಗೆ 675 ಪೈಸೆ ಆಗಿರುತ್ತದೆ. ವಾಣಿಜ್ಯ ಬಳಕೆಗಳಲ್ಲಿ ಸ್ಥಿರ ಶುಲ್ಕ 215 ಗಳಾಗಿದ್ದು ಬಳಕೆದಾರರು ಪ್ರತಿ ಯೂನಿಟ್ ಗೆ 700 ಪೈಸೆ ಆಗಿರುತ್ತದೆ. ಕೈಗಾರಿಕೆಗಳಲ್ಲಿ ಸ್ಥಿರ ಶುಲ್ಕ 150 ರೂ ಗಳಾಗಿದ್ದು ಬಳಕೆ ದರವು ಪ್ರತಿ ಯೂನಿಟ್ ಗೆ 450 ಪೈಸೆ ಆಗಿರುತ್ತದೆ.