ಸುದ್ದಿ ಕನ್ನಡ ವಾರ್ತೆ
ಇಂಡಿ: ಪ್ರತಿಭಟನೆಯಲ್ಲಿ ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಗುತ್ತಿ ಬಸವಣ್ಣ ಕಾಲವೆ, ಉಪಕಾಲುವೆಗಳು ದುರಸ್ತಿಗೊಳಿಸುವಲ್ಲಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಮಾರ್ಚ ಮುಗಿಯುತ್ತಾ ಬಂದರೂ ಕುಡಿಯುವ ನೀರನ್ನು ಹರಿಸುವಲ್ಲಿ ನೀರಾವರಿ ಅಧಿಕಾರಿಗಳು ವಿಳಂಭ ಮಾಡುತ್ತಿದ್ದಾರೆ ಎಂದು ರೈತರು ದೂರಿದರು.
ಇಂಡಿ ತಾಲೂಕಿನಲ್ಲಿ ಹರಿಯುವ ಗುತ್ತಿ ಬಸವಣ್ಣ ಕಾಲುವೆಗೆ ಕುಡಿಯಲು ನೀರು ಹರಿಸಬೇಕು. ಕೇವಲ ಹಂಜಗಿ ಗ್ರಾಮದ ವರೆಗೆ ಮಾತ್ರ ನೀರು ಬರುತ್ತದೆ. ಮುಂದೆ ೮ ಕಿ.ಮಿ ದೂರದಲ್ಲಿರುವ ಗ್ರಾಮಗಳಾದ ಅಂಜುಟಗಿ, ಬೂದಿಹಾಳ, ಭತಗುಣಕಿ, ಅಹಿರಸಂಗ, ಇಂಡಿ ರೈಲ್ವೆ ಸ್ಟೇಷನ್ ಗ್ರಾಮದ ಸುತ್ತ ಮುತ್ತಲಿನ ರೈತರು ವಂಚಿತರಾಗಿದ್ದಾರೆ. ಅದಲ್ಲದೆ ಕಾಲುವೆಯ ಕೊನೆಯ ಭಾಗ ೨೧ ಕಿ.ಮಿ ವರೆಗೂ ನೀರು ಹರಿಸಬೇಕೆಂದು ಆಗ್ರಹಿಸಿ ಅಂಜುಟಗಿ ಗ್ರಾಮದಿಂದ ನೂರಾರು ರೈತರು ಸುಮಾರು ೧೨ ಕಿ.ಮಿ ಪಾದಯಾತ್ರೆ ಮಾಡಿ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನಕಾರರು ಸಭೆಯಾಗಿ ಮಾರಪ್ಟಿತು. ನಂತರ ತಹಶೀಲ್ದಾರ ಬಿ.ಎಸ್.ಕಡಕಬಾವಿ, ಕೆಬಿಜಿನಲ್ ಸುಪುಡೆಂಟ್ ಆಫ್ ಇಂಜನಿಯರ್ ಮನೋಜಕುಮಾರ ಗಡಬಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತದನಂತರ ಪ್ರತಿಭಟನಕಾರರನ್ನು ಉದ್ದೇಶಿಸಿ ಬಿ.ಡಿ.ಪಾಟೀಲ, ಮಾತನಾಡಿ, ಸುಮಾರು ಒಂಬತ್ತು ವರ್ಷಗಳಿಂದ ನಮ್ಮ ಕಾಲುವೆಗಳಿಗೆ ನೀರು ಹರಿಸಿಲ್ಲ. ಪ್ರತಿವರ್ಷ ನೀರು ಬಿಡುವುದಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಸುಳು ಭರವಸೆಗಳು ನೀಡುತಾ ಬಂದಿದ್ದಾರೆ. ಆದರೆ ಈ ಭಾರಿ ಜನ, ಜನವಾರಗಳಿಗೂ ಕುಡಿಯಲು ನೀರು ಸಿಗುತ್ತಿಲ್ಲ. ಕಾಲವೆಯ ಮುಖಾಂತರ ನೀರು ಹರಿಸಿದರೆ ಜನ, ಜಾನವಾರಗೂ ಬದಕುತ್ತವೆ. ಇಲ್ಲದಿದ್ದರೆ ನಾವು ಗುಳೆಹೋಗುವ ಪರಿಸ್ಥಿತಿ ಬಂದಿದೆ. ಕೂಡಲೆ ಅಧಿಕಾರಿಗಳು ಕಾ¯ವೆ ಮುಖಾಂತರ ನೀರು ಹರಿಸಬೇಕು. ಒಂದು ವೇಳೆ ನೀರು ಹರಿಸದೆ ಇದ್ದರೆ. ಮುಂದಿನ ದಿನಗಳಲ್ಲಿ ಆಲಿಮಟ್ಟಿ ಕೆಬಿಜಿನಲ್ ಕಛೇರಿಗೆ ಸುಮಾರು ೧೦ ಸಾವಿರ ರೈತರು ಮುತ್ತಿಗೆ ಹಾಕುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಹಣಮಂತರಯಗೌಡ ಪಾಟೀಲ, ಅಪ್ಪಗೌಡ ಪಾಟೀಲ(ಭೈರುಣಗಿ), ಮರೇಪ್ಪ ಗಿರಣಿವಡ್ಡರ, ಸಿದ್ದು ನಿಚ್ಚಳ, ಬಸುರಾಜ ಹಂಜಗಿ ಮಾತನಾಡಿ, ಗುತ್ತಿ ಬಸವಣ್ಣ ಕಾಲುವೆಯಲ್ಲಿ ನೀರು ಹರಿಸಬೇಕೆಂದು ಆಗ್ರಹಿಸಿ ತಾಂಬಾ ಗ್ರಾಮದಲ್ಲಿ ೫೦೦ ದಿನಗಳ ವರೆಗೆ ಸತ್ಯಾಗ್ರಹ ನಡೆಸಿದರು. ಯಾವುದೆ ಸರಕಾರಗಳು ಕೇವಲ ಭರವಸೆ ನೀಡುತ್ತಿವೆ ಹೊರತಾಗಿ ಕೆಲಸ ಮಾತ್ರ ಶೂನ್ಯ. ಬಜೆಟಿನಲ್ಲಿ ಹಣ ನೀಡಲು ವಿಜಯಪುರ ಜಿಲ್ಲೆಯ ಶಾಸಕರು ಪ್ರಯತ್ನಿಸಬೇಕಾಗಿತ್ತು. ಈ ಭಾಗ ನೀರಾವರಿ ಆಗಬೇಕೆಂದು ಸಿದ್ದೇಶ್ವರ ಶ್ರೀಗಳ ಕನಸಾಗಿತ್ತು. ಯಾರೂ ಕೂಡ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ವರೆಗೆ ನೀರು ಹರಿಸಲು ಪ್ರಯತ್ನಿಸುತ್ತಿಲ್ಲ ಎಂದರು.
ಮಹಾರಾಷ್ಟçದ ನಾಯಕ ಶರದ ಪವಾರರ ಮಾದರಿಯಲ್ಲಿ ಸರಕಾರ ನೀರಾವರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಈ ಭಾಗ ನೀರಾವರಿ ಆಗಲು ಸಾದ್ಯ ಎಂದರು.
ಪ್ರತಿಭಟನೆಯಲ್ಲಿ ಶರಣಪ್ಪ ಡೆಂಗಿ, ನಿಯಾಜ್ ಅಗರಖೇಡ, ಯಲ್ಲಪ್ಪ ಹಿರೇಕುರಬರ, ಶ್ರೀಶೈಲ ಪೂಜಾರಿ, ಮೌನೇಶ ಬಡಿಗೇರ, ಮಾಳಪ್ಪ ಹೂಗಾರ, ಎಸ್.ಟಿ.ತೆಲಸಂಗ ಸೇರಿದಂತೆ ಅಂಜುಟಗಿ, ಬೂದಿಹಾಳ, ಭತಗುಣಕಿ, ಅಹಿರಸಂಗ, ಇಂಡಿ ರೇಲ್ವೆ ಸ್ಟೇಷನ್ ಗ್ರಾಮದ ರೈತರು ಪ್ರತಿಭಟನೆ ಪಾಲ್ಗೊಂಡಿದ್ದರು.
_—————
ಇಂಡಿ: ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕೆಂದು ತಹಶೀಲ್ದಾರ ಬಿ.ಎಸ್.ಕಡಕಬಾವಿ, ಕೆಬಿಜಿನಲ್ ಸುಪುಡೆಂಟ್ ಆಫ್ ಇಂಜನಿಯರ್ ಮನೋಜಕುಮಾರ ಗಡಬಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.