ಸುದ್ದಿ ಕನ್ನಡ ವಾರ್ತೆ
ತೀರ್ಥಹಳ್ಳಿ: ವರ್ಷದ ಮೊದಲ ವರ್ಧಾರಯಾಗಿದ್ದು ಗಾಳಿ ಮಳೆಗೆ ಮನೆಯ ಹಂಚುಗಳು ಹಾರಿ ಹೋಗಿರುವ ಘಟನೆ ಬೆಜ್ಜವಳ್ಳಿ ಯಲ್ಲಿ ನಡೆದಿದೆ.
ತಾಲೂಕಿನ ವಿವಿಧ ಭಾಗದಲ್ಲಿ ಸಂಜೆಯ ವೇಳೆ ಮಳೆಯಾಗಿದ್ದು ಅದರಲ್ಲೂ ಬೆಜ್ಜವಳ್ಳಿ ಭಾಗದಲ್ಲಿ ಗುಡುಗು ಸಿಡಿಲಿನ ಜೊತೆಗೆ ಭಾರಿ ಮಳೆಯಾಗಿದೆ. ಗಾಳಿ ಮಳೆಯ ರಭಸಕ್ಕೆ ಮನೆಯ ಹಂಚುಗಳು ಹಾರಿ ಹೋಗಿವೆ.
ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣ ತಂಪೆರೆದಿದ್ದು ಇನ್ನು ಎರಡು ದಿನ ಮಳೆಯಾದರೆ ಬಿಸಿಲಿನ ತಾಪ ಸ್ವಲ್ಪ ಮಟ್ಟಿಗೆ ಕಡಿಮೆ ಆಗುವ ಸಾಧ್ಯತೆ ಇದೆ