ಸುದ್ದಿ ಕನ್ನಡ ವಾರ್ತೆ

ಕೇಂದ್ರ ಸರಕಾರದಿಂದ ಹಾಗೂ ಭಾರತೀಯ ಪುರಾತತ್ವ ಇಲಾಖೆಯಿಂದ ಔರಂಗಜೇಬನ ಗೋರಿಯ ನಿರ್ವಹಣೆಗಾಗಿ ಪ್ರತಿವರ್ಷ ಲಕ್ಷಾಂತರ ರೂಪಾಯಿಗಳ ನೆರವು ನೀಡಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2021-22 ರಲ್ಲಿ ರೂ. 2,55,160 ಮತ್ತು 2022-23 (ನವೆಂಬರ್ ವರೆಗೆ) ರೂ 2,00,626 ಖರ್ಚು ಮಾಡಲಾಗಿದೆ. ಈ ರೀತಿ, ಇದುವರೆಗೆ ರೂ. 6.50 ಲಕ್ಷ ಹಣ ವ್ಯಯಿಸಲಾಗಿದೆ. ಆದರೆ ಮಹಾರಾಷ್ಟ್ರದ ಗೌರವಯುತ ಸಂಸ್ಕೃತಿಯ ಸಂಕೇತವಾದ ಸಿಂಧುದುರ್ಗ ಕೋಟೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಏಕೈಕ ದೇವಸ್ಥಾನಕ್ಕೆ ಮಹಾರಾಷ್ಟ್ರ ಸರಕಾರವು ಕೇವಲ 250 ರೂಪಾಯಿಗಳ ಮಾಸಿಕ ಸಹಾಯವನ್ನು ನೀಡುತ್ತಿದೆ. “ಹಿಂದೂ ಧರ್ಮ, ಮಹಾರಾಷ್ಟ್ರ ಸಂಸ್ಕೃತಿ ಮತ್ತು ಸ್ವರಾಜ್ಯದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ದೇವಾಲಯಕ್ಕೆ ಇಷ್ಟು ಕಡಿಮೆ ಅನುದಾನ ನೀಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯವಾಗಿದೆ.”

 

“ಔರಂಗಜೇಬನ ಸಮಾಧಿಯ ನಿರ್ವಹಣೆಗೆ ನೀಡಲಾಗುವ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ಸಾಕಷ್ಟು ಆರ್ಥಿಕ ಸಹಾಯವನ್ನು ಘೋಷಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕ ಶ್ರೀ. ಸುನೀಲ್ ಘನವಟ್ ಒತ್ತಾಯಿಸಿದ್ದಾರೆ. ಸರಕಾರವು ಈ ವಿಷಯದ ಬಗ್ಗೆ ತಕ್ಷಣ ಗಮನ ಹರಿಸಬೇಕು, ಇಲ್ಲದಿದ್ದರೆ ಹಿಂದೂ ಸಮಾಜವು ಈ ಅನ್ಯಾಯದ ವಿರುದ್ಧ ತೀವ್ರ ಆಂದೋಲನವನ್ನು ಮಾಡುತ್ತದೆ.”