ಸುದ್ದಿ ಕನ್ನಡ ವಾರ್ತೆ
ತೀರ್ಥಹಳ್ಳಿ : ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರುಣಪುರ ಸಂಕಮ್ಮ ಶೆಡ್ತಿ (112)ವರ್ಷ ರವರು ಇಂದು ಸೋಮವಾರ ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಎರಡು ಗಂಡು, ಮೂರು ಜನ ಹೆಣ್ಣು ಮಕ್ಕಳು, ಸೊಸೆಯಂದಿರು,ಹದಿನೈದು ಜನ
ಮೊಮ್ಮಕ್ಕಳು, ಮೂವತ್ತು ಜನ ಮರಿಮಕ್ಕಳು
ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಕರುಣಪುರದ ಮೖತರ ಸ್ವಹ ಗೃಹದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಇಂದು ಮದ್ಯಾಹ್ನ ನಾಲ್ಕು ಗಂಟೆಗೆ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಮೃತರ ಅಗಲಿಕೆಯ ವಿಷಯ ತಿಳಿಯುತ್ತಿದ್ದಂತೆ ಬಂಟರ ಯಾನೆ ನಾಡವರ ಸಂಘದ ಗೌರವ ಅಧ್ಯಕ್ಷರಾದ ಅಡ್ಡಮನೆ ಪ್ರಭಾಕರ್ ಶೆಟ್ಟಿ, ಅಧ್ಯಕ್ಷರಾದ ಬಿ ಎಲ್ ಪ್ರಭಾಕರ್ ಹೆಗ್ಡೆ, ಕಾರ್ಯದರ್ಶಿ ಬಿ ಅರ್ ರಾಘವೇಂದ್ರ ಶೆಟ್ಟಿ ಸೇರಿದಂತೆ ಬಂಟರ ಸಂಘ ಮತ್ತು ಮಹಿಳಾ ವಿಭಾಗದ ಅನೇಕ ಗಣ್ಯರು ತಮ್ಮ ಸಂತಾಪ ಸೂಚಿಸಿದ್ದಾರೆ