ಸುದ್ದಿಕನ್ನಡ ವಾರ್ತೆ
Goa : ಕರ್ನಾಟಕ ಸರ್ಕಾರವು ಕಣಕುಂಬಿಯಲ್ಲಿ ಕಳಸಾ ಯೋಜನೆಯನ್ನು ಪೂರ್ಣಗೊಳಿಸಿದೆ ಮತ್ತು ಇದೀಗ ಬಂಡೂರಾ ಯೋಜನೆಯ ಕೆಲಸ ಕೂಡ ಭರದಿಂದ ಸಾಗಿದೆ. ಆದರೆ ಗೋವಾ ರಾಜ್ಯ ಸರ್ಕಾರವು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ. ಇದರಿಂದಾಗಿ ಗೋವಾದ ಎಲ್ಲ ಜನರು ಮಹದಾಯಿ ಉಳಿವಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕಿದೆ. ಇದುವರೆಗೂ ಗೋವಾ ರಾಜ್ಯ ಸರ್ಕಾರವಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಮಹದಾಯಿ ವಿಷಯವನ್ನು ಗಭೀರವಾಗಿ ಪರಿಗಣಿಸಿಲ್ಲ ಎಂದು ಸೇವ್ ಮಹದಾಯಿ ಸೇವ್ ಗೋವಾ ಸಂಘಟನೆಯು ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದೆ.

ಸಂಘಟನೆಯ ಪ್ರಮುಖ ಹೃದಯನಾಥ ಶಿರೋಡಕರ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ- ಮಹದಾಯಿ ನದಿ ನೀರನ್ನು ಕರ್ನಾಟಕವು ಕುಡಿಯುವ ನೀರಿಗಾಗಿ ಬಳಕೆ ಮಾಡುತ್ತಿಲ್ಲ. ಆ ಭಾಗದಲ್ಲಿ ಉದ್ಯಮಿಗಳ ಹಿತಕ್ಕಾಗಿ ಮಹದಾಯಿ ನದಿ ನೀರನ್ನು ಕರ್ನಾಟಕ ಸರ್ಕಾರವು ತಿರುಗಿಸಿಕೊಂಡಿದೆ. ಕಣಕುಂಬಿ ಮತ್ತು ಸುತ್ತಮುತ್ತಲಿನ ಜನರು ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿರುವುದನ್ನು ವಿರೋಧಿಸಿದ್ದಾರೆ. ಆದರೆ ಕರ್ನಾಟಕ ಸರ್ಕಾರವು ಅವರ ವಿರೋಧದ ಹೊರತಾಗಿಯೂ ತನ್ನ ಕೆಲಸವನ್ನು ಮುಂದುವರೆಸಿದೆ, ಆದರೆ ಗೋವಾ ಸರ್ಕಾರ ಏನನ್ನೂ ಮಾಡದೆಯೇ ಕೈಕಟ್ಟಿ ಕುಳಿತುಕೊಂಡಿದೆ ಎಂದು ಅವರು ಆರೋಪಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಜಲ ಸಾಖರದಾಂಡೆ, ಮಹೇಶ್ ಮಾಂಬ್ರೆ, ಮತ್ತಿತರರು ಉಪಸ್ಥಿತರಿದ್ದರು.