ಸುದ್ಧಿಕನ್ನಡ ವಾರ್ತೆ
ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಜಲಾಶಯದ ೭ನೇ ಗೇಟನಲ್ಲಿ ತಾಂತ್ರಿಕ ತೊಂದರೆಯಿಂದ ಗೇಟ್ ಮುಚ್ಚದೇ ಇರುವ ಕುರಿತು. ಇಂದು ಶುಕ್ರವಾರ ಹಿಪ್ಪರಗಿ ಬ್ಯಾರೇಜಗೆ ಜಿಲ್ಲಾಧಿಕಾರಿ ಕೆ. ಎಂ. ಜಾನಕಿ ಬೇಟ್ಟಿ ನೀಡಿ ಪರಿಶೀಲನೆ ನಡೆಸಿದರು.
                                 ಈ ವೇಳೆ ಮಾತನಾಡಿದ ಅವರು, ತಾಲೂಕಿನ ಹಿಪ್ಪರಗಿ ಬ್ಯಾರೇಜನ ಏಳನೇ ಗೇಟ್ ತಾಂತ್ರಿಕ ತೊಂದರೆಯಿಂದ ಪೂರ್ಣ ಕೆಳಗಿಳಿಯದೇ ಮೂರಡಿ ಅಂತರದಲ್ಲೇ ನಿಂತಿದ್ದು ಮುಚ್ಚಲು ಸಾಧ್ಯವಾಗದೆ ಇರುವುದರಿಂದ  ಕೆಎನ್‌ಎನ್‌ಎಲ್ ಅಧೀಕ್ಷಕರು, ಮತ್ತು ಹಿಪ್ಪರಗಿ ಬ್ಯಾರೇಜ್ ಸಹಾಯಕ ಎಂಜಿನಿಯರ್ ರವರು ಸದರ್ 7ನೇ ಗೇಟ್ ಗೆ ಹೆಲ್ಮೆಟ್ ಗೇಟ್ಗಳನ್ನು ಅಳವಡಿಸಿದ್ದು ಜನಸಾಮಾನ್ಯರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
     ಈ ಸಂದರ್ಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ್, ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಹಿಪ್ಪರಗಿ ಬ್ಯಾರೇಜ್ ಎಇಇ ಶಿವಮೂರ್ತಿ, ಪಿ ಆರ್ ಮಠಪತಿ , ಎ ಎಸ್ ಬಿರಾದಾರ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.