ಸುದ್ಧಿಕನ್ನಡ ವಾರ್ತೆ 

ಚಿಕ್ಕಮಗಳೂರು:  ಮಳೆಯಿಂದ ಚಾರ್ಮಾಡಿ ಘಾಟಿಯ ಹಲವೆಡೆ  ಧರೆ ಕುಸಿತವಾಗಿದ್ದು ಸಂಚಾರಕ್ಕೆ ಅಡಚಣೆ ಯಾಗಿತ್ತು  .  ಬುಧವಾರ ಸಂಜೆ ಸುರಿದ ಅತಿಯಾದ ಮಳೆಗೆ ಚಾರ್ಮಾಡಿ ಘಾಟಿಯ ಹಲವೆಡೆ ಧರೆ ಕುಸಿತವಾಗಿರುವುದರಿಂದ ಮಣ್ಣು ರಸ್ತೆಗೆ ಬಿದ್ದಿದ್ದು ಒಂದು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆಯಾಗಿತ್ತು.

ವಾಹನಗಳು ಚಾರ್ಮಾಡಿ ಘಟ್ಟದಲ್ಲಿ ಸಾಲುಗಟ್ಟಿ ನಿಂತಿದ್ದವುಮಳೆಯ ರಭಸಕ್ಕೆ ನೀರು ಕೂಡ ಧಾರಾಕಾರವಾಗಿ  ರಸ್ತೆಯಲ್ಲಿಯೇ ಹರಿಯಿತು.ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಸಂಚಾರ ಮುಕ್ತ ಮಾಡಿದ್ದಾರೆ.ಚಾರ್ಮಾಡಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ