ಸುದ್ದಿ ಕನ್ನಡ ವಾರ್ತೆ
ಶಿರಸಿ: ಹಿರಿಯ ರಾಜಕಾರಣಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುವರು. ಅವರು ಸಿಎಂ ಆದರೆ ನನ್ನ ಸಹಕಾರ ಎಂದಿಗೂ ಇದೆ. ಜಿಲ್ಲೆಯ ‌ಪ್ರಗತಿಗೂ ಇದು ಅನುಕೂಲ ಎಂದು ಶಾಸಕ ಭೀಮಣ್ಣ‌ ನಾಯ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮಕೃಷ್ಣ‌ ಹೆಗಡೆ ಅವರ ನಂತರ ಮುಖ್ಯಮಂತ್ರಿ ಸ್ಥಾನ ಯಾರಿಗೂ ಸಿಕ್ಕಿರಲಿಲ್ಲ. ಈಗ ಲಭಿಸಿದರೆ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಇನ್ನಷ್ಟು ಬಲ‌ ಬರುತ್ತದೆ. ಆದರೆ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ತೀರ್ಮಾನವೇ ಅಂತಿಮ ಎಂದೂ ಹೇಳಿದರು.