ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಖಾಸಗಿ ಬಸ್ ಮತ್ತು ಟ್ರಕ್ ನಡುವೆ ರಾಷ್ಟ್ರೀಯ ಹೆದ್ದಾರಿ 63 ಅರಬೈಲ ಘಟ್ಟ ಅತ್ಯಂತ ಅಪಾಯ ಕಾರಿ ತಿರುವು ಯೂ ಟರ್ನ ನಲ್ಲಿ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡ ಘಟನೆ ಬುಧವಾರ ಬೆಳ್ಳಂಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಗೋವಾ ಹೊರಟಿದ್ದ ಖಾಸಗಿ sunshine ಟ್ರಾವೆಲ್ಸ್, ಹಾಗೂ ಸರಕು ತುಂಬಿದ ಲಾರಿ (private Sunshine Travels and a lorry full of goods,) ಮಧ್ಯೆ ಡಿಕ್ಕಿ ಸಂಭವಿಸಿದೆ.
ಯಾವುದೇ ಸಾವು ಸಂಭವಿಸದಿದ್ದರೂ ಲಾರಿಯಾಗಲಿ,ಬಸ್ಸಾಗಲಿ ಒಂದಡಿಯಷ್ಟು ಮುಂದೆ ಹೋಗಿದ್ದರೆ ಕಿ.ಮೀ ನಷ್ಟು ಆಳದ ಪ್ರಪಾತವಿದೆ.ಅದೃಷ್ಠವಶಾತ್ ಬಸ್ಸು ರಸ್ತೆ ಮೇಲೆ ಪಲ್ಟಿ ಹೊಡೆದಿದೆ. ಎಷ್ಟು ಗಂಭೀರತೆಯಿತ್ತೆದರೆ ಲಾರಿ ಪ್ರಪಾತದಲ್ಲಿ ಬೀಳುವುದಕ್ಕೆ ಇನ್ನೇನೂ ಒಂದಡಿ ಮಾತ್ರ ಬಾಕಿ ಇತ್ತು.
ತುಂಬಾ ಮಂಜುನುಸುಕಿದ ವಾತಾವರಣದಿಂದಾಗಿ ಈ ಅನಾಹುತ ಸಂಭವಿಸಿರಬಹುದೆನ್ನಲಾಗಿದೆ. ಈ ಪ್ರದೇಶದಲ್ಲಿ ಹೆದ್ದಾರಿ ಕಳೆದ ಎರಡು ವರ್ಷಗಳ ಹಿಂದೆ ಭಾರೀ ಪ್ರಮಾಣದಲ್ಲಿ ಕುಸಿದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.ಈ ಪ್ರದೇಶದಲ್ಲಿ ಅಪಾಯವನ್ನು ತಡೆಯಲು ಇಲಾಖೆ ಹೆದ್ದಾರಿಯನ್ಬು ಅಗಲೀಕರಣಗೊಳಿಸಿ ದ್ವಿಮುಖ ಸಂಚಾರವನ್ನು ಕಲ್ಪಿಸಿತ್ತು.
ಈ ಘಟನೆಯಲ್ಲಿ ಗಾಯಗೊಂಡವರ ಸಂಖ್ಯೆ ಎಷ್ಟು,ಯಾರು? ಎಲ್ಲಿಯವರು ಎಂಬ ಮಾಹಿತಿಯಿನ್ನು ಲಭ್ಯವಾಗಿಲ್ಲ.