ಸುದ್ಧಿಕನ್ನಡ ವಾರ್ತೆ
ಗೋಕರ್ಣ: ಪ್ರಸಿದ್ಧ ಗೋಕರ್ಣದ ಓಂ ಬೀಚ್ ನಲ್ಲಿ ಜಲಕ್ರೀಡೆಗೆ ತೆರಳಿದ್ದ ಗೋವಾ ಮೂಲದ ಸಾಗರ(24) ಮತ್ತು ಆದಿತ್ಯ ಬುಧೇಕರ್ (23) ಎಂಬ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ದಳದವರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ,

ಗೋವಾದಿಂದ ಇವರಿಬ್ಬರೂ ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದ್ದು, ಬೀಚ್ ನಲ್ಲಿ ಜಲಕ್ರೀಡೆಗೆ ಇಳಿದಿದ್ದ ಸಂದರ್ಭದಲ್ಲಿ ಅಲೆಗಳ ರಭಸಕ್ಕೆ ನೀರಲ್ಲಿ ಮುಳುಗುತ್ತಿದ್ದವರನ್ನು ಕೂಡಲೇ ಧಾವಿಸಿ ಬಂದ ಜೀವರಕ್ಷಕ ದಳದ ಸಿಬ್ಬಂಧಿಗಳು ಇವರನ್ನು ರಕ್ಷಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.