Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಮುಂಬರುವ ಜನವರಿಯ ವೇಳೆಗೆ ಸಂಪೂರ್ಣ ಗೋವಾದಲ್ಲಿ ಎಐ ಆಧಾರಿದ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಇಡೀ ಗೋವಾದಲ್ಲಿ ಎಐ ಆಧಾರಿತ ಕ್ಯಾಮರಾಗಳು ವಾಹನ ಸಂಚಾರ್ಗಳ ಮೇಲೆ ನಿಗಾ ಇಡಲಿವೆ. ಕ್ಯಾಮರಾಗಳ ಮೂಲಕ ದಂಡ ಸಂಗ್ರಹಿಸುವುದು ಸರ್ಕಾರದ ಉದ್ದೇಶವಲ್ಲ. ವಾಹನ ಚಾಲಕರನ್ನು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಾರಿಗೆ ಸಚಿವ ಮಾವಿನ್ ಗುದಿನ್ಹೊ ಹೇಳಿದ್ದಾರೆ.

ಪಣಜಿಯಲ್ಲಿ ಮಾಧ್ಯಮ ವರದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು- ಮೊದಲ ಹಂತದಲ್ಲಿ ಗೋವಾದಲ್ಲಿ 29 ಪ್ರಮಿಖ ಸ್ಥಳಗಳಲ್ಲಿ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಈ ಕ್ಯಾಮರಾಗಳ ಮೂಲಕ ಪ್ರತಿದಿನ ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ನೋಟಿಸ್ ನೀಡಲಾಗುತ್ತಿದೆ. ಇದರಿಂದಾಗಿ ಸಂಚಾರಿ ನಿಯಮಗಳನ್ನು ಪಾಲಿಸುವ ಪೃವೃತ್ತಿ ಹೆಚ್ಚುತ್ತಿದೆ ಎಂದು ಸಚಿವ ಮಾವಿನ್ ಗುದಿನ್ಹೊ ಅಭಿಪ್ರಾಯಪಟ್ಟರು.

Banner Ad

 

ಈಗಾಗಲೇ ಗೋವಾದಲ್ಲಿ ಎಐ ಕ್ಯಾಮರಾ ಅಳವಡಿಕೆಯಾಗಿರುವುದರಿಂದ ಸಾರಿಗೆ ನಿಯಮ ಪಾಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಪಿಯುಸಿ ಕೇಂದ್ರಗಳಲ್ಲಿ ಹೆಚ್ಚಿನ ಜನರು ಬಂದು ತಮ್ಮ ವಾಹನಗಳಿಗೆ ಪಿಯುಸಿ ಮಾಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಎಲ್ಲರೂ ವಾಹನಗಳ ವಿಮೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ವಾಹನ ಚಲಿಸುವಾಗ ಯಾರಾದರೂ ಅಪಘಾತದಲ್ಲಿ ಸಾವನ್ನಪ್ಪಿದರೆ ಚಾಲಕ ವಯಕ್ತಿಕವಾಗಿ ಜವಾಬ್ದಾರರಾಗಬಹುದು, ಇದರಿಂದ ಪ್ರತಿ ವಾಹನಕ್ಕೂ ವಿಮೆ ಹೊಂದಿರುವುದು ಅಗತ್ಯ ಎಂದು ಸಚಿವ ಮಾವಿನ್ ಗುದಿನ್ಹೊ ಹೇಳಿದರು.

ಬಾಡಿಗೆ-ಎ-ಕ್ಯಾಬ್ ಸೇವೆಗಳನ್ನು ನಿಯಂತ್ರಿಸಲು ಮತ್ತು ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಸುಗಮಗೊಳಿಸಲು ಪೋಲಿಸ್, ಆರ್ ಟಿಒ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯ ಸಮೀತಿಯನ್ನು ರಚಿಸಲಾಗಿದೆ. ನಾಗರೀಕರಿಗೆ ಕನಿಷ್ಠ ಅನಾನುಕೂಲತೆ ಉಂಟಾಗದಂತೆ ಮತ್ತು ನಗರದಲ್ಲಿ ಸಂಚಾರ ಸುಗಮವಾಗಿರುವುದಮ್ನು ಖಚಿತಪಡಿಸಿಕೊಳ್ಳಲು ಈ ಸಮೀತಿಯು ಕೆಲಸ ಮಾಡುತ್ತದೆ ಎಂದು ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿದರು.

Banner Ad