Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆಯೇ ಜಲಚರಗಳು ಜನವಸತಿಯತ್ತ ಬರಲಾರಂಭಿಸಿವೆ. ಗೋವಾದ ಖಾಂಡೆಪಾರ್ ನಲ್ಲಿ ದೊಡ್ಡ ಮೊಸಳೆಯೊಂದು ಮನೆಗೆ ಪ್ರವೇಶಿಸಿದೆ. ಮೊಸಳೆ ಮನೆಯೊಳಕ್ಕೆ ಬರುತ್ತಿದ್ದಂತೆಯೇ ಮನೆಯ ಜನರು ಕಂಗಾಲಾಗಿ ಓಡಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣ ಗಳಲ್ಲಿ ಭಾರಿ ವೈರಲ್ ಆಗಿದೆ.

ಲಭ್ಯವಾದ ಮಾಹಿತಿಯ ಪ್ರಕಾರ- ಗೋವಾದ ಖಾಂಡೆಪಾರ್ ನಲ್ಲಿ ದೊಡ್ಡ ಮೊಸಳೆ ಹಠಾತ್ತನೆ ಮನೆಯೊಂದಕ್ಕೆ ಪ್ರವೇಶಿಸುತ್ತಿದ್ದಂತೆಯೇ ಕುಟುಂಬಸ್ಥರು ಆತಂಕಕ್ಕೊಳಗಾದರು. ಕುಟುಂಬ ಸದಸ್ಯರು ಸುರಕ್ಷಿತ ಸ್ಥಳಕ್ಕೆ ಓಡಿದರು. ಮೊಸಳೆ ಮನೆಯೊಳಗೆ ಬಂದಿದೆ ಎಂಬ ಮಾಹಿತಿ ಲಭಿಸುತ್ತಿದ್ದಂತೆಯೇ ಗ್ರಾಮಸ್ಥರು ಮನೆಯ ಮುಂದೆ ನೆರೆದಿದ್ದರು.

Banner Ad

 

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರಕ್ಷಣಾ ತಂಡ ಧಾವಿಸಿ ಬಂದಿತು. ಮೊಸಳೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಯಿತು. ಸತತ ಕಾರ್ಯಾಚರಣೆಯ ನಂತರ ರಕ್ಷಣಾ ತಂಡ ಮೊಸಳೆಯನ್ನು ಎಚ್ಚರಿಕೆಯಿಂದ ಸೆರೆಹಿಡಿಯಿತು. ಮೊಸಳೆಯನ್ನು ಸೆರೆಹಿಡಿದು ಕರೆದೊಯ್ದಿರುವುದರಿಂದ ಈ ಮನೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Banner Ad