ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಕೆಲ ದಿನಗಳ ಹಿಂದೆ ಗೋವಾದ ಬರ್ಚ ಬಾಯ್ ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಗಡದಲ್ಲಿ 25 ಜನರು ಬಲಿಯಾಗಿದ್ದರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಗೋವಾ ಸರ್ಕಾರವು ಸುರಕ್ಷತೆಯ ದೃಷ್ಠಿಯಿಂದ ರಾಜ್ಯದಲ್ಲಿನ ಹಲವು ನೈಟ್ ಕ್ಲಬ್ ಗಳನ್ನು ಸೀಲ್ ಮಾಡಲಾಗಿತ್ತು. ಆದರೆ ಹೊಸ ವರ್ಷದ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಸರ್ಕಾರವು ಸೀಲ್ ಮಾಡಿದ್ದ ಹಲವು ನೈಟ್ ಕ್ಲಬ್ ಗಳು ಇದೀಗ ಅಬ್ಬರದಿಂದ ಆರಂಭಗೊಂಡಿವೆ. ಹೊಸ ವರ್ಷದ ಪಾರ್ಟಿ ಆಯೋಜಿಸಲಾಗಿದೆ.
ಆತಂಕಕರ ಸಂಗತಿಯೇನೆಂದರೆ ಯಾವ ಕ್ಲಬ್ ಗಳನ್ನು ಸುರಕ್ಷತೆಯ ಕಾರಣಕ್ಕಾಗಿ ಹಾಗೂ ನಿಯಮವನ್ನು ಉಲ್ಲಂಘಿಸಿದ್ದರಿಂದ ಸೀಲ್ ಮಾಡಲಾಗಿತ್ತು. ಆದರೆ ಇದೀಗ ಎರಡೇ ವಾರದಲ್ಲಿ ಈ ಕ್ಲಬ್ ಗಳಿಗೆ ಅಗತ್ಯ ಎಲ್ಲ ಪರವಾನಗಿ ಲಭಿಸಿದೆ ಎಂದೇ ಹೇಳಲಾಗುತ್ತಿದೆ. ಈ ಕುರಿತಂತೆ ನಾಗರೀಕರು ಹಾಗೂ ಸಾಮಾಜಿಕ ಹೋರಾಟಗಾರರು ಸಂಶಯ ವ್ಯಕ್ತಪಡಿಸಿದ್ದಾರೆ. ಯಾವ ದುರ್ಘಟನೆಯಲ್ಲಿ 25 ಜನರು ಸಾವನ್ನಪ್ಪಿದ್ದರೋ ಆ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮುನ್ನ ಇತರ ಕ್ಮಬ್ ಗಳಿಗೆ ಕ್ಲೀನ್ ಚಿಟ್ ನೀಡಲಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಗೋವಾದ ನೈಟ್ ಕ್ಲಬ್ ಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ಪಾರ್ಟಿ ಆಯೋಜಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪಾರ್ಟಿಯ ಜಾಹೀರಾತು ನೀಡಲಾಗಿದೆ. ಹೊಸ ವರ್ಷದ ಪಾರ್ಟಿಗೆ ನೈಟ್ ಕ್ಲಬ್ ಗಳಲ್ಲಿ ಒಂದು ಟೇಬಲ್ ಬುಕಿಂಗ್ ಮಾಡಲು 1.2 ಲಕ್ಷ ಪಡೆಯಲಾಗಿದೆ. ಇಷ್ಟೊಂದು ದರ ಹೆಚ್ಚಿದ್ದರೂ ಕೂಡ ನೈಟ್ ಕ್ಲಬ್ ಗಳಿಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಇಷ್ಟೇ ಅಲ್ಲದೆಯೇ ಎಲ್ಲ ಟೇಬಲ್ ಗಳನ್ನು ಮುಂಗಡವಾಗಿ ಬುಕಿಂಗ್ ಮಾಡಿರುವುದು ಕಂಡುಬರುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ನೈಟ್ ಕ್ಲಬ್ ನಲ್ಲಿ ಅಗ್ನಿ ಅವಗಢ ಸಂಭವಿಸಿ 25 ಜನ ಸಾವನ್ನಪ್ಪಿದ ಭೀಕರ ಘಟನೆಯ ನಂತರ ಗೋವಾ ರಾಜ್ಯ ಸರ್ಕಾರವು ಹಲವು ಕ್ಲಬ್ ಗಳನ್ನು ಸುರಕ್ಷತೆಯ ದೃಷ್ಟಿಯಿಂದ ಬಂದ್ ಮಾಡಿತ್ತು. ಈ ಕ್ಲಬ್ ಗಳು ಅಗ್ನಿ ಅವಘಡಕ್ಕೆ ಪ್ರತಿಬಂಧಕವಾಗಿ ಅಗತ್ಯ ವ್ಯವಸ್ಥೆ ಹೊಂದಿವೆಯೇ…? ಅಗತ್ಯ ಸುರಕ್ಷತಾ ದೃಷ್ಠಿಯಿಂದ ಕ್ರಮ ಕೈಗೊಳ್ಳಲಾಗಿದೆಯೇ..? ಇವ್ಯಾವುದೂ ವ್ಯವಸ್ಥೆ ಇಲ್ಲದೆಯೇ ಗೋವಾದಲ್ಲಿ ಪ್ರವಾಸಿಗರ ಜೀವದೊಂದಿಗೆ ಆ ಟವಾಡಲಾಗುತ್ತಿದೆಯೇ…? ಎಂಬ ಪ್ರಶ್ನೆ ಕೂಡ ಎದುರಾಗಿದೆ.
