ಸುದ್ಧಿಕನ್ನಡ ವಾರ್ತೆ
ಪಣಜಿ: ಹಳೇಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಸ್ವಾಗತ ಕೋರಲು ಗೋವಾ ಪೆಡ್ನೆ ತಾಲೂಕಿನ ಮೋರಜಿ, ಆಶ್ವೆ, ಮಾಂದ್ರೆ, ಹರಮಲ್ , ಕೇರಿ, ಬೀಚ್ ಭಾಗಗಳಲ್ಲಿ ದೇಶ-ವಿದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ. ಇದರಿಂದಾಗಿ ಈ ಭಾಗದ ಹೋಟೆಲ್ ಗಳು, ರೆಸಾರ್ಟಗಳು ಸಂಪೂರ್ಣ ಫುಲ್ ಆಗಿದೆ.
ಡಿಸೆಂಬರ್ 31 ರಂದು ಸಂಜೆ ಸೂರ್ಯಾಸ್ತ ಹಾಗೂ ಜನವರಿ 1 ರಂದು ಸೂರ್ಯೋದಯದ ಸಂದರ್ಭದಲ್ಲಿ ಈ ಬೀಚ್ ಗಳಲ್ಲಿ ಸಂಗೀತ ರಜನಿ ಪಾರ್ಟಿಗಳನ್ನು ಆಯೋಜಿಸಲಾಗಿದೆ. ಅಂತರಾಷ್ಟ್ರೀಯ ಖ್ಯಾತಿಯ ಡಿಜೆ, ನೃತ್ಯಕಲಾಕಾರರುಹಾಗೂ ವಾದಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಭಾಗದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆ ಉಂಟಾಗಿದೆ. ಕಾರ್ಯಕ್ರಮದ ಕೆಲ ಆಯೋಜಕರು ಖಾಸಗಿ ಜಮೀನನ್ನು ಬಾಡಿಗೆಗೆ ಪಡೆದು ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗೋವಾ ರಾಜ್ಯದ ಇತರ ಬೀಚ್ ಗಳಲ್ಲಿಯೂ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ. ಈಗಾಗಲೇ ದೇಶ-ವಿದೇಶಗಳಿಂದ ಗೋವಾಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಹಳೇಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಸ್ವಾಗತ ಕೋರಲು ಸಜ್ಜಾಗಿದ್ದಾರೆ.
