ಸುದ್ಧಿಕನ್ನಡ ವಾರ್ತೆ
ಪಣಜಿ: ಅಪಘಾತದಲ್ಲಿ ಮೃತ 19 ವರ್ಷದ ಯುವಕನ ಹೃದಯವು ಗೋವಾದ ಉಮೇಶ್ ವರಕ್ ಎಂಬ ಅಗ್ನಿಶಾಮಕ ದಳದ ಸಿಬ್ಬಂಧಿಯ ಜೀವ ಉಳಿಸಿದೆ. ಮೃತ ಯುವಕನ ಹೃದಯವನ್ನು ಗೋವಾದ ಉಮೇಶ್ ವರಕ್ ರವರಿಗೆ ಹೃದಯ ಕಸಿ ಮಾಡಿದ್ದರಿಂದ ಇವರ ಜೀವ ಉಳಿದಂತಾಗಿದೆ.
ಗೋವಾದ ಕಾಸಾರವರ್ಣೆ ಪೆಡ್ನೆಯ ಅಗ್ನಿಶಾಮಕ ದಳದ ಸಿಬ್ಬಂಧಿ ಉಮೇಶ್ ವರಕ್ ರವರಿಗೆ ಹೃದಯ ಸಮಸ್ಯೆ ಎದುರಾಯಿತು. ಈತ ಚಿಕಿತ್ಸೆ ಪಡೆಯುತ್ತಿದ್ದ ಚನ್ನೈ ಆಸ್ಪತ್ರೆಯ ವೈದ್ಯರು ಹೃದಯ ಶಸ್ತ್ರ ಚಿಕಿತ್ಸೆಯ ಮೂಲಕ ಹೃದಯ ಕಸಿ ಮಾಡುವ ಬಗ್ಗೆ ಸಲಹೆ ನೀಡಿದ್ದರು. ಆದರೆ ಈತನ ಕುಟುಂಬ ಬಡ ಕುಟುಂಬವಾಗಿದ್ದರಿಂದ ಇಷ್ಟೊಂದು ಹಣ ಖರ್ಚು ಮಾಡುವ ಶಕ್ತಿ ಇವರ ಬಳಿ ಇರಲಿಲ್ಲ.
ಮಧುರೈಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದ 19 ವರ್ಷದ ಯುವಕನ ಹೃದಯ ಲಭಿಸುವುದಾಗಿ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಮಾಂದ್ರೆಯ ಶಾಸಕ ಜೀತ್ ಅರೋಲ್ಕರ್ ರವರು ಲಕ್ಷಾಂತರ ರೂ ಖರ್ಚು ಮಾಡಿ ಮಧುರೈನಲ್ಲಿ ಮೃತ ಯುವಕನ ಹೃದಯವನ್ನು ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಚಚ್ನೈ ಆಸ್ಪತ್ರೆಗೆ ತರಲು ಸಹಾಯ ಮಾಡಿದರು.
ಇದರಿಂದಾಗಿ ಹೃದಯ ಶಸ್ತ್ರಚಿಕಿತ್ಸೆಯ ತುರ್ತು ಪರಿಸ್ಥಿತಿಯಲ್ಲಿದ್ದ ಗೋವಾದ ಉಮೇಶ್ ವರಕ್ ರವರಿಗೆ ಚನ್ನೈ ಆಸ್ಪತ್ರೆಯ ವೈದ್ಯರು ಭಾನುವಾರ ಯಶಸ್ವಿಯಾಗಿ ಹೃದಯವನ್ನು ಕಸಿ ಮಾಡಿದ್ದಾರೆ. ಈ ಮೂಲಕ ಅಪಘಾತದಲ್ಲಿ ಮಧುರೈನಲ್ಲಿ ಮೃತ ಯುವಕ ಗೋವಾದ ವ್ಯಕ್ತಿಗೆ ಜೀವದಾನ ಮಾಡಿದ್ದಾನೆ.
