ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ದೇಶ-ವಿದೇಶಗಳಲ್ಲಿ ಸುಂದರ ಪ್ರವಾಸಿ ತಾಣಗಳಿಂದಾಗಿ ಪ್ರಸಿದ್ಧಿ ಪಡೆದಿದೆ. ಪ್ರವಾಸೋದ್ಯಮವು ಗೋವಾದ ಆರ್ಥಿಕತೆಯ ಪ್ರಮುಖ ಆಧಾರವಾಗಿದೆ. ಹೀಗಿರುವಾಗ ಗೋವಾದಲ್ಲಿ ಪ್ರವಾಸಿಗರಿಗೆ ಉಂಟಾಗುತ್ತಿರುವ ಕೆಟ್ಟ ಅನುಭವಗಳು ಗೋವಾ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಂತಾಗುತ್ತಿದೆ. ಇದೀಗ ಗೋವಾಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಕೆಲವು ಕಹಿ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಭಾರಿ ವೈರಲ್ ಆಗಿದೆ.
ಗೋವಾದಲ್ಲಿ ಬೆಲೆ ಏರಿಕೆಯು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ವಿದೇಶ ಪ್ರವಾಸ ಕೈಗೊಂಡ ಅನುಭವ ನೀಡುತ್ತಿದೆ. ಕಲ್ಲಂಗಡಿ ಜ್ಯೂಸ್ ದರ ಸಾಧಾರಣವಾಗಿ 40 ರೂ ಇರುತ್ತದೆ. ಆದರೆ ಗೋವಾದಲ್ಲಿ 220 ರೂ ಪಡೆಯಲಾಗುತ್ತಿದೆ. ಬರ್ಗರ ದರ 350 ರೂಗಳಿಂದ 500 ರೂ ಗಳ ಆಸುಪಾಸಿನಲ್ಲಿದೆ. ಮಧ್ಯಮ ವರ್ಗದವರು ಗೋವಾಕ್ಕೆ ಬರಬೇಕಾದರೆ ಗೋವಾದಲ್ಲಿ 2000 ರೂ ಖರ್ಚು ಮಾಡಬೇಕಾಗುತ್ತದೆ. ಗೋವಾದಲ್ಲಿ ಒಂದು ಇಡೀ ದಿನದ ಊಟ ತಿಂಡಿಯ ಖರ್ಚು 5000 ರೂ ಆಗಲಿದೆ ಎಂದು ಪ್ರವಾಸಿಗರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದು ಇದೀಗ ಭಾರಿ ಚರ್ಚೆಗೂ ಕಾರಣವಾಗಿದೆ.
ಗೋವಾದಲ್ಲಿ ಕೇವಲ ಬೆಲೆ ಏರಿಕೆ ಮಾತ್ರವಲ್ಲದೆಯೆ ಇಲ್ಲಿನ ಹೋಟೆಲ್ ಕರ್ಮಚಾರಿಗಳು ಮತ್ತು ಗೈಡ್ಸಗಳ ವರ್ತನೆಯ ಬಗ್ಗೆ ಕೂಡ ಈ ಪ್ರವಾಸಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಹಣ ನೀಡಿಯೂ ಕೂಡ ವರ್ತನೆ ಸರಿಯಿಲ್ಲದಿದ್ದರೆ ನಾವು ಮತ್ತೆ ಗೋವಾಕ್ಕೆ ಬರಬೇಕೆ…? ಎಂಬ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರವಾಸಿಗರು ಪ್ರಶ್ನಿಸಿದ್ದಾರೆ.
ಈ ಪ್ರವಾಸಿಗರು ಹಂಚಿಕೊಂಡಿರುವ ತಮ್ಮ ಕಹಿ ಅನುಭವನ ಗೋವಾಕ್ಕೆ ಆಗಮಿಸುವ ಇತರ ಪ್ರವಾಸಿಗರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ. ಗೋವಾದಲ್ಲಿ ಒಂದು ದಿನದ ಊಟ ತಿಂಡಿಗೆ 5000 ರೂ ಖರ್ಚು ಆಗಲಿದೆ ಎಂಬುದು ಪ್ರವಾಸಿಗರ ಆತಂಕಕಾರಿ ವಿಷಯವಾಗಿದೆ. ನಿಜವಾಗಿಯೂ ಗೋವಾದಲ್ಲಿ ಇಷ್ಟೊಂದು ಖರ್ಚಾಗಲಿದೆಯೆ…?ಈ ಪ್ರವಾಸಿಗರು ತಂಗಿದ್ದು ಯಾವ ಸ್ಥಳದಲ್ಲಿ…?ಪಂಚತಾರಾ ಹೋಟೆಲ್ ಖರ್ಚಿನ ವಿಷಯವನ್ನು ಹೇಳಿದ್ದಾರೆಯೇ…? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.
ಹೊಸ ವರ್ಷ ಸಂಭ್ರಮಾಚರಣೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಗೋವಾಕ್ಕೆ ಆಗಮಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಇಂತಹ ವೀಡಿಯೋಗಳು ಪ್ರವಾಸಿಗರ ಮೇಲೆ ಪರಿಣಾಮ ಬೀರಲಿದೆಯೇ..?
