ಸುದ್ಧಿಕನ್ನಡ ವಾರ್ತೆ
ಪಣಜಿ: ಆಕಳ ಹೊಟ್ಟೆಲ್ಲಿ ಶಸ್ತ್ರಚಿಕಿತ್ಸೆ ಮೂಲಕ 48.3 ಕಿಲೊ ಪ್ಲ್ಯಾಸ್ಟಿಕ್ ಮತ್ತು ಇತರ ಕಸದ ವಸ್ತುಗಳನ್ನು ಹೊರತೆಗೆದ ಘಟನೆ ಗೋವಾದ ವಾಳಪೈ ಪಿಸುರ್ಲೆ ಭಾಗದಲ್ಲಿ ನಡೆದಿದೆ. ಗೋವಾದಲ್ಲಿ ಇದುವರೆಗೂ ನಡೆಸಿದ ಆಕಳ ಶಸ್ತ್ರ ಚಿಕಿತ್ಸೆಗಳ ಪೈಕಿ ಇದು ಅತಿ ಹೆಚ್ಚು ಪ್ಲ್ಯಾಸ್ಟಿಕ್ ಕಸ ಹೊರತೆಗೆದ ಪ್ರಕರಣವಾಗಿದೆ. ಮನುಷ್ಯರ ಬೇಜವಾಬ್ದಾರಿಯಿಂದಾಗಿ ಪ್ಲ್ಯಾಸ್ಟಿಕ್ ಕಸಗಳು ಆಕಳ ಹೊಟ್ಟೆ ಸೇರುವಂತಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಮನುಷ್ಯರು ಬೇಕಾಬಿಟ್ಟಿಯಾಗಿ ಪ್ಲ್ಯಾಸ್ಟಿಕ್ ರಸ್ತೆಗೆ ಎಸೆಯುತ್ತಿರುವುದು ಪ್ರಾಣಿಗಳ ಜೀವಕ್ಕೇ ಕುತ್ತುಬರುತ್ತಿದೆ.
ಗೋವಾದ ವಾಳಪೈ ಪಿಸುರ್ಲೆಯಲ್ಲಿ 12 ವರ್ಷದ ಆಕಳೊಂದು ತಿಂಗಳು ತುಂಬುವ ಮುನ್ನವೇ ಜನ್ಮನೀಡಿತ್ತು. ಕರುವಿಗೆ ಜನ್ಮ ನೀಡಿದ ನಂತರ ಆಕಳ ದೇಹಸ್ಥಿತಿ ಸಂಪೂರ್ಣ ಹದಗೆಟ್ಟಿತು. ಆಕಳ ಬಳಿ ಎದ್ದುನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಶುವೈದ್ಯರನ್ನು ಕರೆಯಿಸಿ ಆರೋಗ್ಯ ತಪಾಸಣೆ ನಡೆಸಿದಾಗ ಆಕಳ ಹೊಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ಕಸ ಇರುವುದು ಗಮನಕ್ಕೆ ಬಂತು.
ಆಕಳ ಈ ಗಂಭೀರ ಸ್ಥಿತಿಯನ್ನು ಕಂಡು ಕೂಡಲೇ ವಾಳಪೈ “ಅಖಿಲ ವಿಶ್ವ ಗೋವರ್ಧನ ಕೇಂದ್ರ”ಕ್ಕೆ ಕರೆತರಲಾಯಿತು. ಅಲ್ಲಿ ವೈದ್ಯರು ಆಕಳಿಗೆ ಶಸ್ತ್ರಚಿಕಿತ್ಸೆ ನಡೆಸುವ ನಿರ್ಣಯವನ್ನು ಪಶುವೈದ್ಯರು ತೆಗೆದುಕೊಂಡರು. ಶಸ್ತ್ರಚಿಕಿತ್ಸೆ ನಡೆಸಿದಾಗ ಆಕಳ ಹೊಟ್ಟೆಯಲ್ಲಿ ಇಷ್ಟೊಂದು ಪ್ರಮಾಣಕದಲ್ಲಿ ಕಸ ಇರುವುದನದ್ನು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ.
ಆಕಳ ಹೊಟ್ಟೆಯಲ್ಲಿ ಬರೋಬ್ಬರಿ 48.8 ಕಿಲೊ ಪ್ಲ್ಯಾಸ್ಟಿಕ್ ಮತ್ತು ಇತರ ಕಸ ಪತ್ತೆಯಾಗಿದೆ. ಪ್ಲ್ಯಾಸ್ಟಿಕ್ ಮಾತ್ರವಲ್ಲದೆಯೇ ಪ್ಲಾಸ್ಟಿಕ್ ಪೈಪ್ ತುಂಡುಗಳು, ಚರ್ಮದ ತುಂಡುಗಳು, ಹಳೇಯ ರೇನ್ ಕೋಟ್ ತುಂಡುಗಳು, ಬಟ್ಟೆಯ ತುಂಡುಗಳು, ನೈಲಾನ್ ಹುರಿ, ಬೈಂಡಿಂಗ್ ವಾಯರ್ ತುಣುಕುಗಳು ಪತ್ತೆಯಾಗಿದೆ.
ವೈದ್ಯರು ಈ ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಆಕಳ ಜೀವ ಉಳಿಸಿದ್ದಾರೆ. ಆದರೆ ಈ ಘಟನೆಯು ಹಲವು ಪ್ರಶ್ನೆಗಳು ಉಧ್ಭವಿಸುವಂತೆ ಮಾಡಿದೆ. 48 ಕಿಲೊ ಪ್ಲ್ಯಾಸ್ಟಿಕ್ ನ್ನು ಹೊಟ್ಟೆಯಲ್ಲಿಟ್ಟುಕೊಂಡು ಆಕಳು ಇಷ್ಟು ದಿನ ಹೇಗೆ ಬದುಕಿತು…? ಇದು ದೊಡ್ಡ ಚಮತ್ಕಾರವೇ ಆಗಿದೆ. ಇದುವರೆಗೂ ನಾವು ಹಲವು ಶಸ್ತ್ರ ಚಿಕಿತ್ಸೆ ನಡೆಸಿದ್ದೇವೆ ಆದರೆ ಆಕಳ ಹೊಟ್ಟೆಯಿಂದ ಇಷ್ಟೊಂದು ಪೊರಮಾಣದಲ್ಲಿ ಪ್ಲ್ಯಾಸ್ಟಿಕ್ ಮತ್ತು ಕಸ ಹೊರತೆಗೆದಿರುವುದು ಇದೇ ಮೊದಲು. ಇದು ನಾವು ರಸ್ತೆಯ ಮೇಲೆ ಪ್ಲ್ಯಾಸ್ಟಿಕ್ ಎಸೆಯುತ್ತಿರುವುದರ ಪರಿಣಾಮವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
