ಸುದ್ಧಿಕನ್ನಡ ವಾರ್ತೆ
ಪಣಜಿ: ಭಾರತೀಯ ಜನತಾ ಪಾರ್ಟಿಯ ಗುರಿ ಖಂಡಿತವಾಗಿಯೂ ಅಧಿಕಾರ ಪಡೆಯುವುದೇ ಆಗಿದೆ. ಆದರೆ ನಮಗೆ ಅಧಿಕಾರ ಕೇವಲ ಬಳಕೆಯ ಸರಕಲ್ಲ. ರಾಷ್ಟ್ರವಾಧಿ ವಿಚಾರಗಳು ಮತ್ತು ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮಾತ್ರ ನಮಗೆ ಅಧಿಕಾರ ಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ನುಡಿದರು.

ಪಣಜಿಯಲ್ಲಿ ಆಯೋಜಿಸಿದ್ದ “ಸಾಗರ ಮಂಥನ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಯಾವುದೇ ರಾಜಕೀಯ ಪಕ್ಷಕ್ಕೆ ತನ್ನದೇ ಆದ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಅಧಿಕಾರ ಬೇಕು. ಅಧಿಕಾರವಿದ್ದರೆ ಮಾತ್ರ ಪಕ್ಷವು ತನ್ನ ನೀತಿಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ನಾವು ಅಧಿಕಾರದಲ್ಲಿರುವ ಕಾರಣದಿಂದಲೇ “370”ನೇಯ ವಿಧಿಯನ್ನು ಬದಲಾಯಿಸಲು ಸಾಧ್ಯವಾಯಿತು. ಅಧಿಕಾರವಿಲ್ಲದಿದ್ದರೆ ಇದರ ಕುರಿತು ಕೇವಲ ಭಾಷಣ ಮಡಬೇಕಿತ್ತು. ಜನರ ಹೃದಯದಲ್ಲಿ ಸ್ಥಾನಗಳಿಸುವುದು ಮತ್ತು ಅವರ ಪ್ರೀತಿಯನ್ನು ಗಳಿಸುವುದು ನಮಗೆ ಅಧಿಕಾರಕ್ಕಿಂತ ಮುಖ್ಯವಾಗಿದೆ ಎಂದು ಬಿ.ಎಲ್.ಸಂತೋಷ ನುಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ನಮ್ಮ ಸ್ಪೂರ್ತಿಯಾಗಿದೆ. ಸಂಸ್ಕøತಿ,ರಾಷ್ಟ್ರೀಯತೆ ಮತ್ತು ನೈತಿಕ ಮೌಲ್ಯಗಳಿಗೆ ನಾವು ಅಲ್ಲಿಂದ ಸ್ಪೂರ್ತಿ ಪಡೆಯುತ್ತೇವೆ. ನನಗೆ ಅದು ಮನೆ ಎಂದು ಹೇಳಬಹುದು. ನಾವು ವಿವಿಧ ವಿಷಯಗಳೊಂದಿಗೆ ಚರ್ಚೆ ನಡೆಸುತ್ತೇವೆ. ಯವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಪಕ್ಷ ಸಂಘಟನೆಯನ್ನು ಮುನ್ನಡೆಸಲು ನಮಗೆ ಶೇ 100 ರಷ್ಟು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಬಿಎಲ್ ಸಂತೋಷ ನುಡಿದರು.

ಕೆಲವೊಮ್ಮೆ ಕೆಲಸದಲ್ಲಿ ಅಡತಡೆಯುಂಟಾದಾಗ ನಾವು ಮಾರ್ಗವನ್ನು ಬದಲಾಯಿಸಬೇಕಾಗುತ್ತದೆ, ಆದರೆ ಗುರಿ ಮಾತ್ರ ಒಂದೇ ಆಗಿರುತ್ತದೆ. ಬಿಜೆಪಿಯಲ್ಲಿ ಶಿಸ್ತು ಮತ್ತು ಸೂಚನೆಗಳನ್ನು ಪಾಲಿಸುವುದು ಅತ್ಯಂತ ಮುಖ್ಯ. ಬಿಜೆಪಿ ಪ್ರಜಾಸತ್ತಾತ್ಮಕವಾಗಿ ನಡೆಸುವ ಪಕ್ಷ. ನಿಯಮಗಳನ್ನು ಕೇಂದ್ರ ಮಟ್ಟದಲ್ಲಿ ರಚಿಸಲಾಗಿದ್ದರೂ ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೂ ಅನುಸರಿಸಲಾಗುತ್ತದೆ. ಕಳೆದ ಕೆಲ ದಿನಗಳ ಹಿಂದೆರ ಮಂಡಲ ಅಧ್ಯಕ್ಷರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ಪಕ್ಷವು ನಿರ್ಧರಿಸಿತ್ತು. ಈ ನಿಯಮವನ್ನು ಕೇಂದ್ರ ಮಟ್ಟದಲ್ಲಿ ಮಾಡಲಾಗಿದ್ದರೂ ಕೂಡ ಮಂಡಲ ಅಧ್ಯಕ್ಷರನ್ನು ಇದೇ ನಿಯಮವನ್ನು ಅನುಸರಿಸಿ ಸ್ಥಳೀಯ ಮಟ್ಟದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಬಿಎಲ್ ಸಂತೋಷ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ , ಬಿಹಾರ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಉಪಸ್ಥಿತರಿದ್ದರು.