ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪರ್ವರಿಯಲ್ಲಿ 6 ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯಾದ್ಯಂತ ಆಕ್ರೋಷಕ್ಕೆ ಕಾರಣವಾಗಿದೆ. ಈ ಪ್ರಕರಣದ ಗಂಭೀರತೆ ಮತ್ತು ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಷವನ್ನು ಅರಿತುಕೊಂಡ ಸುಕೂರ್ ಪಂಚಾಯತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಶಂಕಿತ ಆರೋಪಿಯ ಮನೆಗೆ ಸುಕೂರ್ ಪಂಚಾಯತ ಬುಧವಾರ ಬೀಗಹಾಕಿ ಸೀಲ್ ಮಾಡಿದೆ. ಸಾರ್ವಜನಿಕ ಸುರಕ್ಷತೆಯನ್ನು ಉಲ್ಲೇಖಿಸಿ 7 ದಿನಗಳಲ್ಲಿ ಮನೆ ಖಾಲಿ ಮಾಡುವಂತೆ ಶಂಕಿತನ ಕುಟುಂಬಕ್ಕೆ ನೋಟಿಸ್ ನೀಡಿದೆ.

ಪರ್ವರಿಯ ಪೋಲಿಸರು ಈಗಾಗಲೇ ಶಾಲಾ ವ್ಯಾನ್ ಚಾಲಕ ಅಲ್ಲಾಭಕ್ಷ ಸೈಯ್ಯದ್ ನನ್ನು ಬಂಧಿಸಿದ್ದು, ನ್ಯಾಯಾಲಯವು ಈತನಿಗೆ 7 ದಿನಗಳ ಕಸ್ಟಡಿ ಜಾರಿಗೊಳಿಸಿದೆ. ಈ ಘಟನೆಯಿಂದಾಗಿ ಆಕ್ರೋಷಗೊಂಡಿದ್ದ ಸ್ಥಳೀಯರು ಶಂಕಿತನ ಮನೆಯ ಮುಂದೆ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದಾಗ ಉಧ್ವಿಗ್ನತೆಯುಂಟಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಆಡಳಿತ ಕ್ರಮ ಕೈಗೊಂಡು ಕೈಡಲೆ ಮನೆಯನ್ನು ಸೀಲ್ ಮಾಡಿದೆ. ಈ ಕ್ರಮ ಕೈಗೊಳ್ಳುವ ಮೊದಲು ಶಂಕಿತನ ಪತ್ನಿ ಹಾಗೂ 16 ವರ್ಷದ ಮಗಳು ಮನೆಯಿಂದ ಜೊರಬಂದಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

 

ಮಕ್ಕಳ ಸುರಕ್ಷತೆಯ ಜವಾಬ್ದಾರಿ ಹೊಂದಿದ್ದ ಸ್ಕೂಲ್ ವ್ಯಾನ್ ಚಾಲಕ ಇಂತಹ ಹೇಯ ಕೃತ್ಯ ಎಸಗಿದ್ದಾನೆ ಎಂದು ಪೋಷಕರು ಆಕ್ರೋಷ ಹೊರಹಾಕಿದ್ದಾರೆ. ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕೇಂದು ಸ್ಥಳೀಯರು ಸರ್ಕಾರವನ್ನು ಆಘ್ರಹಿಸಿದ್ದಾರೆ. ಆರೋಪಿಯ ಮನೆಯನ್ನು ಸೀಲ್ ಮಾಡಿರುವುದರಿಂದ ಸ್ಥಳೀಯರ ಆಕ್ರೋಷ ಶಮನವಾಗಿದೆ. ಪೋಲಿಸರು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

6 ವವರ್ಷದ ಬಾಲಕಿಯು ಹೇಳಿದ ಘಟನೆಯ ಮಾಹಿತಿ ಆಘಾತಕಾರಿಯಾಗಿತ್ತು. ಕೂಡಲೇ ಪೋಷಕರು ಪರ್ವರಿ ಪೋಲಿಸರಿಗೆ ದೂರು ನೀಡಿದ್ದರು. ಸಂತ್ರಸ್ತ ಬಾಲಕಿಯು ಬಾರ್ದೇಸ್ ತಾಲೂಕಿನ ಶಾಲೆಯಲ್ಲಿ ಓದುತ್ತಿದ್ದಳು. ಈಕೆಗೆ ಮನೆಯಿಂದ ಶಾಲೆಗೆ ಹೋಗಿ ಬರಲು ವ್ಯಾನ ವ್ಯವಸ್ಥೆ ಮಾಡಿದ್ದರು. ಪ್ರತಿದಿನ ಈ ಬಾಲಕಿ ಶಾಲೆಗೆ ತೆರಳುವಾಗ ಮೊದಲು ವ್ಯಾನ ಹತ್ತುತ್ತಿದ್ದಳು ಹಾಗೂ ಶಾಲೆಯಿಂದ ಬರುವಾಗ ಕೊನೇಯಲ್ಲಿ ವ್ಯಾನ ಇಳಿಯುತ್ತಿದ್ದಳು. ಇದರಿಂದಾಗಿ ಈಕೆಯು ಶಾಲೆಗೆ ಹೋಗುವಾಗಲೂ ಹಾಗೂ ಶಾಲೆಯಿಂದ ಬರುವಾಗಲು ಒಂಟಿಯಾಗಿರುತ್ತಿದ್ದಳು. ಇದನ್ನೇ ವ್ಯಾನ್ ಚಾಲಕ ದುರ್ಬಳಕೆ ಮಾಡಿಕೊಂಡ ಎಂದೇ ಹೇಳಲಾಗಿದೆ.