ಸುದ್ಧಿಕನ್ನಡ ವಾರ್ತೆ
ಪಣಜಿ:ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾಕ್ಕೆ ಬರುವ ಪ್ರವಾಸಿಗರೇ ಗಮನಿಸಿ…ಗೋವಾದಲ್ಲಿ ವಾಹನ ಚಲಾಯಿಸುವಾಗ ನಿಯಮ ಉಲ್ಲಂಘಿಸಿದರೆ ಗೋವಾದಲ್ಲಿ ಬೊಡಿ ಕ್ಯಾಮರಾ ಅಳವಡಿಸಿಕೊಂಡಿರುವ ಪೋಲಿಸ್ ಇನ್ಸಪೆಕ್ಟರ್ ಮತ್ತು ಸಬ್ ಇನ್ಸಪೆಕ್ಟರ್ ಮಾತ್ರ ವಾಹನ ಸವಾರರಿಗೆ ಚಲನ್ ನೀಡುವ ಅಧಿಕಾರ ಹೊಂದಿದ್ದಾರೆ. ಇದರಿಂದಾಗಿ ಗೋವಾದಲ್ಲಿ ಪ್ರವಾಸಿಗರ ಬಳಿ ಯಾವುದೇ ಪೋಲಿಸರು ಹಣ ಕೇಳಿದರೂ ಕೂಡ ಹಣ ನೀಡುವ ಅಗತ್ಯವಿಲ್ಲ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಗೋವಾ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.
ಈ ರೀತಿಯ ಬೊಡಿ ಕ್ಯಾಮರಾ ಅಳವಡಿಸಿಕೊಂಡು ಚನಲ್ ನೀಡುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಗೋವಾ ರಾಜ್ಯ ಪಾತ್ರವಾಗಿದೆ. ಇದರಿಂದಾಗಿ ಪ್ರವಾಸಿಗರು ಮೋಸಹೋಗಿ ಹಣ ಕಳೆದುಕೊಳ್ಳುವ ಸಾಧ್ಯತೆಯೂ ಕಡಿಮೆಯಾಗಲಿದೆ. ಇನ್ಸ ಪೆಕ್ಟರ್ ಮತ್ತು ಸಬ್ ಇನ್ಸಪೆಕ್ಟರ್ ಶ್ರೇಣಿಗಿಂತ ಕೆಳಗಿನ ಅಧಿಕಾರಿಗಳಿಗೆ ಈ ರೀತಿಯ ಚಲನ್ ನೀಡುವ ಅಧಿಕಾರವಿರುವುದಿಲ್ಲ. ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಮತ್ತು ನಾಗರೀಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಮಹತ್ವದ ಹೆಜ್ಜೆಯಿಟ್ಟಿದೆ.
ಗೋವಾ ರಾಜ್ಯಕ್ಕೆ ಇದೀಗ ಕ್ರಿಸ್ ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆಗೆ ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದಾರೆ. ಗೋವಾದಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಗೋವಾ ರಾಜ್ಯ ಸರ್ಕಾರರು ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಗೋವಾದಲ್ಲಿ ಪ್ರವಾಸಿಗರಿಂದ ಪೋಲಿಸರು ಹಣ ಪಡೆಯುತ್ತಾರೆ ಎಂಬ ವದಂತಿಯಿತ್ತು. ಆದರೆ ಇದೀಗ ವಾಹನ ಸವಾರರು ನಿಯಮ ಉಲ್ಲಂಘಿಸಿದಾಗ ಚನಲ್ ನೀಡುವ ಪೋಲಿಸ್ ಇನ್ಸ ಪೆಕ್ಟರ್ ಬೊಡಿ ಕ್ಯಾಮರಾ ಹೊಂದಿರಲೇಬೇಕು. ಇದರಿಂದಾಗಿ ಇಂತಹ ಊಹಾಪೋಹ ಅಥವಾ ಅಪವಾದಗಳಿಗೂ ತೆರೆ ಬಿದ್ದಂತಾಗಿದೆ.
