ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಇತ್ತೀಚೆಗಷ್ಟೆ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಜನತೆಯ ಮನಸ್ಸಿನ ಮಾಸುವ ಮುನ್ನವೇ ಇದೀಗ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಠವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಗೋವಾದ ಉತ್ತರ್ಡಾ ಬೀಚ್ ನಲ್ಲಿದ್ದ “ಜಾಮಿಂಗ್ ಗೋಟ್” ಶಾಕ್ಸ ಗೆ (“Jamming Goat” Shaks) ಭಾನುವಾರ ಅಗ್ನಿ ಅಗವಘಡ ಸಂಭವಿಸಿದೆ. ಈ ಅಗ್ನಿ ಅವಘಡದ ಭೀಕರತೆ ಎಷ್ಟಿತ್ತೆಂದರೆ ಕೆಲವೇ ನಿಮಿಷದಲ್ಲಿ ಸಂಪೂರ್ಣ ಶಾಕ್ಸ ಭಸ್ಮವಾಗಿದೆ.
“ಜಾಮಿಂಗ್ ಗೋಟ್” ಇದು ಒಂದು ಸಾಮಾನ್ಯ ಬೀಚ್ ಶಾಕ್ಸ ಅಲ್ಲ. ಇದರಲ್ಲಿ ವಿಶೇಷ ಖಾದ್ಯಗಳಿಗೆ ಪ್ರಸಿದ್ಧಿಯಿದೆ. ಇದರಿಂದಾಗಿ ಈ ಶಾಕ್ಸ ಹೆಚ್ಚಿನ ಪ್ರವಾಸಿಗರ ಆಕರ್ಷಣೆಯಾಗಿದೆ. ಈ ಶಾಕ್ಸ ಗೆ ಭಾನುವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಇದರಿಂದಾ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ದಿನವಿಡೀ ಈ ಶಾಕ್ಸ ನಲ್ಲಿ ಹೆಚ್ಚು ಪ್ರವಾಸಿಗರ ಗರ್ದಿ ಇದ್ದೇ ಇರುತ್ತದೆ. ಆದರೆ ಅಗ್ನಿ ಅವಘಡ ಬೆಳಗಿನ ಜಾವ ಸಂಭವಿಸಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎನ್ನಲಾಗಿದೆ. ಈ ಘಟನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಡಿಸೆಂಬರ್ 6 ರಂದು ಗೋವಾದ ನೈಟ್ ಕ್ಲಬ್ ನಲ್ಲಿ ಅಗ್ನಿ ಅವಗಢ ಸಂಭವಿಸಿ 25 ಜನ ಸಾವನ್ನಪ್ಪಿದ್ದರು. ಗೋವಾದಲ್ಲಿ ನಡೆದ ಈ ಘಟನೆ ದೇಶದ ಜನತೆಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಬೀಚ್ ಶಾಕ್ಸ ನಲ್ಲಿ ಅಗ್ನಿ ದುರಂತ ಸಂಭವಿಸಿರುವುದು ಮತ್ತೆ ಆತಂಕ ಮೂಡಿಸಿದೆ. ಹೊಸ ವರ್ಷ ಸಂಭ್ರಮಾಚರಣೆಗೆ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಗೋವಾಕ್ಕೆ ಪ್ರವಾಸಿಗರು ಭೇಟಿ ನೀಡಲಿದ್ದು ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಗೋವಾ ಸರ್ಕಾರವು ಇನ್ನಷ್ಟು ಕಠಿಣ ನಿಯಮವನ್ನು ಜಾರಿಗೊಳಿಸಬೇಕಿದೆ.
