ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಮಠದ 550 ನೇಯ ವರ್ಷದ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ಮಠದ ಪ್ರವೇಶದ್ವಾರದ ಬಳಿ ನಿರ್ಮಿಸಲಾಗುತ್ತಿರುವ 77 ಅಡಿ ಎತ್ತರದ ಶ್ರೀರಾಮನ ಮೂರ್ತಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಶ್ರೀರಾಮನ ಮೂರ್ತಿ ನಿರ್ಮಾಣಕ್ಕಾಗಿ ಆಯೋಜನ ಸಮೀತಿ ಹಾಗೂ ದೇವಸ್ಥಾನ ಸಮೀತಿ, ಪದಾಧಿಕಾರಿಗಳು ಹಲವು ದಿನಗಳಿಂದ ಹೆಚ್ಚಿನ ಪರಿಶ್ರಮ ವಹಿಸಿದ್ದರು. ಮೂರ್ತಿ ನಿರ್ಮಾಣ ಕಲಾಕಾರರು ಸುಂದರ ರಾಮನ ಮೂರ್ತಿಯನ್ನು ಪರಿಪೂರ್ಣಗೊಳಿಸಿದ್ದಾರೆ. ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ರವರು ಶ್ರೀರಾಮನ ಮೂರ್ತಿಯ ಅನಾವರಣಗೊಳಿಸಲಿದ್ದಾರೆ.
ನವೆಂಬರ್ 28 ರಂದು ಶ್ರೀರಾಮನ ಮೂರ್ತಿಯ ಅನಾವರಣ ಕಾರ್ಯಕ್ರಮದ ನಂತರ ಶ್ರೋಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿ ರವರು ಆಶೀರ್ವಚನ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭಾ ಕಾರ್ಯಕ್ರಮಕ್ಕೆ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಪ್ರವೇಶ ನೀಡಲಾಗುತ್ತದೆ ಎನ್ನಲಾಗಿದೆ.
