ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪರ್ತಗಾಳಿ ಮಠದ 550 ನೇಯ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಚರಿಸುತ್ತಿರುವ ಶ್ರೀರಾಮ ದಿಗ್ವಿಜಯ ರಥ ಯಾತ್ರೆಯು  (Shree Ram digvijaya Ratha Yatra) ವಾದ ಮಡಗಾಂವ ಗೆ ಆಗಮಿಸಲಿದೆ. ನವೆಂಬರ್ 25 ರಂದು ಸಂಜೆ ರಿವಣ್ ಮಠದಿಂದ ಈ ರಥಯಾತ್ರೆಯು ಹೊಡಲಿದ್ದು ಮಡಗಾಂವ ರಾವಣಫೊಂಡ ಜಂಕ್ಷನ್ ನಲ್ಲಿ ಸಂಜೆ 5 ಗಂಟೆಗೆ ಬಂದು ತಲುಪಲಿದೆ. ಈ ಸಂದರ್ಭದಲ್ಲಿ ಮಠಗ್ರಾಮದ ಎಲ್ಲ ಅನುಯಾಯಿಗಳು ಹಾಗೂ ಭಕ್ತಾದಿಗಳು ಅಲ್ಲಿ ಉಪಸ್ಥಿತರಿರಬೇಕೆಂದು ಬಲರಾಮ ಕೇಂದ್ರ ಮಠಗ್ರಾಮ ಮಠ ಸಂಕುಲದ ಅಧ್ಯಕ್ಷ ಪ್ರವಾಸ ನಾಯಕ ರವರು ಮನವಿ ಮಾಡಿದ್ದಾರೆ.

ಶ್ರೀರಾಮ ದಿಗ್ವಿಜಯ ರಥವು ನಂತರ ಕೊಂಕಣ ರೈಲ್ವೆ ನಿಲ್ದಾಣ, ರೈಲ್ವೆ ಬ್ರಿಜ್, ನಗರಪಾಲಿಕೆ ವೃತ್ತ, ಲೋಹಿಯಾ ಮೈದಾನ ರಸ್ತೆ, ಸಿನೆ ವಿಶಾಂತ ಆಕೆಮ್ ರಸ್ತೆ, ಪಾಂಡವ ಕಪೇಲ್, ಹಳೇಯ ಚೌಗುಲೆ ಕಾಲೇಜು, ಬೋಲಶೆ ಸರ್ಕಲ್, ಮಠ ರಸ್ತೆ ಈ ಮಾರ್ಗವಾಗಿ ಬಲರಾಮ ಕೇಂದ್ರ,ಮಠಗ್ರಾಮ ಮಠಸಂಕುಲ, ಜೀವೋತ್ತಮ ನಗರ ಧೋಗಳ್ ಗೆ ಬಂದು ತಲುಪಲಿದೆ.

ಶ್ರೀರಾಮ ದಿಗ್ವಿಜಯ ರಥಯಾತ್ರೆಯು  (Shree Ram digvijaya Ratha Yatra) ಈ ಮಾರ್ಗವಾಗಿ ಸಾಗುವ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮನೆಯ ಮುಂಭಾಗದಲ್ಲಿ ಸಾಗುವಾಗ ಪ್ರತಿಯೊಬ್ಬರೂ ಮನೆಯ ಮುಂದೆ ಆರತಿ ಬೆಳಗಿ ಪುಷ್ಪಹಾರ ಅರ್ಪಣೆ ಮಾಡುವ ಇಚ್ಛೆ ಹೊಂದಿರಬಹುದು. ಆದರೆ ಸಮಯದ ಅಭಾವದ ಕಾರಣ ರಥವನ್ನು ಎಲ್ಲಿಯೂ ಮಾರ್ಗ ಮಧ್ಯದಲ್ಲಿ ನಿಲ್ಲಿಸಲಾಗುವುದಿಲ್ಲ. ಯಾರಾದರೂ ಭಕ್ತಾದಿಗಳು ರಥಕ್ಕೆ ಆರತಿ ಬೆಳಗುವದು ಅಥವಾ ಪುಷ್ಪಹಾರ ಅರ್ಪಿಸುವ ಇಚ್ಛೆ ಹೊಂದಿದ್ದರೆ ಅವರು ಬಲರಾಮ ಕೇಂದ್ರ,ಮಠಗ್ರಾಮ ಸಂಕುಲದಲ್ಲಿ ಉಪಸ್ಥಿತರಿರಬೇಕು ಎಂದು ಸೂಚಿಸಲಾಗಿದೆ.