ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ದೀರ್ಘ ಕಾಲದ ಪರ್ಯಾಯವಾಗಿ ಮೆಟ್ರೊ ರೈಲು (Goa Metro Rail) ಪ್ರಾರಂಭಿಸುವ ಕುರಿತಂತೆ ಗಂಭೀರವಾಗಿ ವಿಚಾರ ಮಾಡಬೇಕು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಗೋವಾ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯಪಟ್ಟಿದ್ದಾರೆ.
ಗೋವಾ ರಾಜ್ಯ ಒಂದು ಸಣ್ಣ ರಾಜ್ಯವಾಗಿದ್ದರೂ ಕೂಡ-ಗೋವಾದ ಕಾಣಕೋಣ, ಮಡಗಾಂವ, ಪಣಜಿ, ಮಾಪ್ಸಾ, ಪೆಡ್ನೆ,ಬಿಚೋಲಿ ಹಾಗೂ ವಾಳಪೈ ಈ ಪ್ರಮುಖ ನಗರಗಳನ್ನು ಜೋಡಿಸಲು ಆಧುನಿಕ ಸಂಪರ್ಕ ವ್ಯವಸ್ಥೆ ಹಾಗೂ ಪರಿಸರಕ್ಕೆ ಪೂರಕವಾದ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಅಗತ್ಯವಿದೆ. ಗೋವಾದಲ್ಲಿ ಮೆಟ್ರೊ ನೆಟ್ ವರ್ಟ (Metro Network) ಸ್ಥಾಪಿಸಿದರೆ ಗೋವಾ ರಾಜ್ಯದಲ್ಲಿ ಟ್ರಾಫಿಕ್ ಸಮಸ್ಯೆ ಪ್ರಮಾಣ ಕೊಂಚ ಕಡಿಮೆಯಾಗಲಿದೆ. ಅಂತೆಯೇ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೂ ಪ್ರಯಾಣ ಅತ್ಯಂತ ಸುಲಭವಾಗಲಿದೆ ಎಂದು ಮನೋಹರ್ ಲಾಲ್ ಖಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಗೋವಾ ರಾಜ್ಯದಲ್ಲಿ ಮೆಟ್ರೊ ರೈಲು (Metro Rail) ಆರಂಭಿಸಲು ಕೇಂದ್ರ ಸರ್ಕಾರದಿಂದ 4 ರಿಂದ 7 ಕೋಟಿ ಆರ್ಥಿಕ ಸಹಾಯಧನ ಲಭಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ನುಡಿದರು.
