ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಬೀಚ್ ನಲ್ಲಿ ಪರವಾನಗಿ ಪಡೆದುಕೊಳ್ಳದೆಯೇ ಅನಧೀಕೃತ ಕಾರ್ಯಕ್ರಮ ನಡೆಸುತ್ತಿರುವವರ ವಿರುದ್ಧ ಪ್ರವಾಸೋದ್ಯಮ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಗೋವಾದ ಮಾಂದ್ರೆ ಬೀಚ್ ನಲ್ಲಿ “ರಿವಾ ಬೀಚ್ ರೆಸಾರ್ಟ” ನಿಯಮವನ್ನು ಉಲ್ಲಂಘಿಸಿ ಬೀಚ್ ವೆಡ್ಡಿಂಗ್ (Beach wedding)  ಆಯೋಜಿಸಿದ್ದರಿಂದ ಗೋವಾ ರಾಜ್ಯ ಪ್ರವಾಸೋದ್ಯಮ ಇಲಾಖೆಯು (A fine of Rs 1 lakh) 1 ಲಕ್ಷ ರೂ ದಂಡ ವಿಧಿಸಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ನೀಡಿರುವ ಮಾಹಿತಿಯ ಅನುಸಾರ- ನವೆಂಬರ್ 17 ಸೋಮವಾರ ಸಂಜೆ ಮಾಂದ್ರೆ ಬೀಚ್ ನಲ್ಲಿ ಪರವಾನಗಿ ಪಡೆದುಕೊಳ್ಳದೆಯೇ ಬೀಚ್ ವೆಡ್ಡಿಂಗ್ ( Beach wedding) ಆಯೋಜಿಸಲಾಗಿತ್ತು. ಪ್ರವಾಸೋದ್ಯಮ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ವೆಡ್ಡಿಂಗ್ ಸೆಟ್ ಅಳವಡಿಸುತ್ತಿರುವ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೆಡ್ಡಿಂಗ್ ಸಿದ್ಧತೆಯನ್ನು ತಡೆದರು. ಇಷ್ಟೇ ಅಲ್ಲದೆಯೇ ವೆಡ್ಡಿಂಗ್ ಸೆಟ್ ತೆರವುಗೊಳಿಸುವಂತೆಯೂ ಸೂಚನೆ ನೀಡಿದರು.

ರೆಸಾರ್ಟ ಕರ್ಮಚಾರಿಗಳು ಪ್ರವಾಸೋದ್ಯಮ ಇಲಾಖೆಯ ಪರವಾನಗಿ ಪಡೆದುಕೊಳ್ಳದೆಯೇ ನಿಯಮವನ್ನು ಉಲ್ಲಂಘಿಸಿ ವೆಡ್ಡಿಂಗ್ ಆಯೋಜಿಸಿದ್ದಕ್ಕೆ ರೆಸಾರ್ಟ ಗೆ 1 ಲಕ್ಷ ರೂ ದಂಡ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರವಾಸೋದ್ಯಮ ಇಲಾಖೆಯ ಸಂಚಾಲಕ ಕೇದಾರ್ ನಾಯ್ಕ ಮಾಹಿತಿ ನೀಡಿ- ಪ್ರವಾಸೋದ್ಯ ಕ್ಷೇತ್ರದಲ್ಲಿ ನಿಯಮಗಳನ್ನು ಪಾಲನೆ ಮಾಡುವುದು ಖಡ್ಡಾಯವಾಗಿದೆ. ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿ ನೀಡಿದರು.