ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ಇಂದು 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (Inter national Film festival of India) ಆರಂಭಗೊಳ್ಳಲಿದೆ.ಸೂಪರ್ ಸ್ಟಾರ್ ರಾಮಚರಣ್ ರವರು ಈ ಚಲನಚಿತ್ರೋತ್ಸವನ್ನು ಉಧ್ಘಾಟಿಸಲಿದ್ದಾರೆ. ಪಣಜಿಯ ಓಲ್ಡ ಜಿಎಂಸಿ ಬಳಿ ಮಧ್ಯಾನ್ಹ 3 ಗಂಟೆಗೆ ಉಧ್ಘಾಟನಾ ಸಮಾರಂಭ ನಡೆಯಲಿದೆ. ನವೆಂಬರ್ 28 ರ ವರೆಗೆ ಈ ಮಹೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ಪಣಜಿಯ ಹಳೇಯ ಸಚಿವಾಲಯದ ಬಳಿಯಿಂದ ಕಲಾ ಅಕಾಡಮಿಯ ವರೆಗೆ ಪೆರೇಡ್ ಮತ್ತು ಸ್ಥಬ್ದಚಿತ್ರ ಮೆರವಣಿಗೆ ನಡೆಯಲಿದೆ. ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ (IFFI) ಹಾಲಿವುಡ್,ಬಾಲಿವುಡ್, ಸೇರಿದಂತೆ ಮರಾಠಿ ಚಲನಚಿತ್ರ ಕ್ಷೇತ್ರದ ಕಲಾವಿದರು ಉಪಸ್ಥಿತರಿರಲಿದ್ದಾರೆ. ರಜನೀಕಾಂತ್, ಅಮೀರ್ ಖಾನ್, ಅಲ್ಲು ಅರ್ಜುನ್, ಅನುಪಮ್ ಖೇರ್, ಬಾಬಿ ಡೆಯೊಲ್ , ಮನೋಜ್ ವಾಜಪೇಯಿ, ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಾಯಿಪಲ್ಲವಿ ಸೇರಿದಂತೆ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಪಣಜಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಪ್ರಮುಖ ಮಾರ್ಗವನ್ನು ವಿದ್ಯುದಲಂಕೃತಗೊಳಿಸಲಾಗಿದೆ. ಪಣಜಿಯ ಪ್ರಮುಖ ಸರ್ಕಲ್ ಗಳಲ್ಲಿ ಪ್ಲೆಕ್ಸಗಳನ್ನು ಹಾಕಲಾಗಿದೆ. ಒಟ್ಟಾರೆ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಗೋವಾ ರಾಜಧಾನಿ ಪಣಜಿ ಸಜ್ಜಾಗಿದೆ.
