ಸುದ್ಧಿಕನ್ನಡ ವಾರ್ತೆ
ಪಣಜಿ: ಪ್ರಸಕ್ತ ನವೆಂಬರ್ 20 ರಿಂದ 28 ರವರೆಗೆ ಪಣಜಿಯ ಐನೊಕ್ಸ ಪರಿಸರದಲ್ಲಿ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (IFFI) ನಡೆಯಲಿದೆ. ಈ ಚಲನಚಿತ್ರ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇದುವರೆಗೂ 7500 ಜನ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ  (IFFI) ಸಿದ್ಧತಾ ಕಾರ್ಯಗಳ ಕುರಿತಂತೆ ಪಣಜಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸುದ್ಧಿಗಾರರಿಗೆ ಮಾಹಿತಿ ನೀಡಿ- ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉಧ್ಘಾಟನಾ ಸಮಾರಂಭ ನವೆಂಬರ್ 20 ರಂದು ಭವ್ಯ ಹಾಗೂ ರಂಗಬಿರಂಗೆ ಪೆರೇಡ್ ನಿಂದ ಆರಮಭಗೊಳ್ಳಲಿದೆ. ನವೆಂಬರ್ 20 ರಂದು ಮಧ್ಯಾನ್ಹ 3.30 ಕ್ಕೆ ಎಂಟರ್ ಟೈರ್ನೆಂಟ್ ಸೊಸೈಟಿ ಆಫ್ ಗೋವಾ (ESG) ಕಾರ್ಯಾಲಯದ ಬಳಿಯಿಂದ ಕಲಾ ಅಕಾಡಮಿಯ ವರೆಗೆ ಪೆರೇಡ್ ನಡೆಯಲಿದೆ. ಈ ಪೆರೇಡ್ ನಲ್ಲಿ ವಿವಿಧ ರಾಜ್ಯಗಳ ಚಿತ್ರರಥಗಳು ಹಾಗೂ ಭಾರತೀಯ ಸಂಸ್ಕøತಿಯ ಪ್ರದರ್ಶನ ನಡೆಯಲಿದೆ. ಈ ಪೆರೇಡ್ ನಲ್ಲಿ ಒಟ್ಟೂ 34 ಸ್ಥಬ್ದ ಚಿತ್ರಗಳು ಇರಲಿದೆ. ಈ ಪೈಕಿ 12 ಸ್ಥಬ್ದಚಿತ್ರಗಳ ವ್ಯವಸ್ಥೆಯನ್ನು ಗೋವಾ ಸರ್ಕಾರವೇ ಮಾಡಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

ಗೋವಾ ರಾಜ್ಯದಲ್ಲಿ ಸ್ಥಳೀಯರಿಗೆ ಮನೋರಂಜನೆಗಾಗಿ ಪಣಜಿಯ ಓಲ್ಡ ಜಿಎಂಸಿ ಕಾಂಪ್ಲೇಕ್ಸ ನ ಹೊರಭಾಗದಲ್ಲಿ ಪ್ರತಿದಿನ ಸಂಜೆ ಇಫಿ ಮೈಲ್ಸ ಆಯೋಜಿಸಲಾಗುವುದು. ಇದರಲ್ಲಿ ವಿವಿಧ ಕಾರ್ಯಕ್ರಮಗಳು ಹಾಗೂ ಫುಡ್ ಸ್ಟಾಲ್ ಇರಲಿದೆ. ಅಂತೆಯೇ ಮೀರಾಮಾರ್ ಬೀಚ್ , ಮಡಗಾಂವ ರವೀಂದ್ರ ಭವನ, ವಾಗಾತೋರ್ ಬೀಚ್ ಗಳಲ್ಲಿ ಓಪನ್ ಥಿಯೇಟರ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 127 ದೇಶಗಳಿಂದ 3400 ಚಲನಚಿತ್ರಗಳ ಅರ್ಜಿಗಳು ಬಂದಿವೆ. ಪ್ರಸಕ್ತ ವರ್ಷ ನವೆಂಬರ್ 28 ರಂದು ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಜನೀಕಾಂತ್ ಹಾಗೂ ಎನ್ ಬಾಲಕೃಷ್ಣನ್ ರವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ.