ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದ ಮಂಗಳೂರು ಮಲ್ಪೆ ಮೀನುಗಾರಿಕಾ ದೊಡ್ಡ ಬೋಟ್ ಗೋವಾದ ಸರಹದ್ದಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ಮೀನುಗಾರಿಕಾ ಬೋಟ್ ನ್ನು ಗೋವಾ ರಾಜ್ಯ ಮೀನುಗಾರಿಕಾ ಇಲಾಖೆ ವಷಪಡಿಸಿಕೊಂಡಿದೆ.

ಈ ಕುರಿತಂತೆ ಲಭ್ಯವಾದ ಮಾಹಿಹಿತಿಯ ಅನುಸಾರ- ಮಂಗಳೂರು ಮಲ್ಪೆ ಮೀನುಗಾರಿಕಾ ದೊಡ್ಡ ಬೋಟ್ ಗೋವಾದ ಸರಹದ್ದಿನಲ್ಲಿ ಬರುವ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು ಎನ್ನಲಾಗಿದೆ. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಗೋವಾ ಮೀನುಗಾರಿಕಾ ಇಲಾಖೆ ಈ ದೊಡ್ಡ ಬೋಟನ್ನು ವಷಪಡಿಸಿಕೊಂಡು ಪಣಜಿ ಜೆಟ್ಟಿಗೆ ಕರೆತಂದಿದೆ.

ಗೋವಾದ ಸಮುದ್ರದ ಸರಹದ್ದಿನಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮಂಗಳೂರು ಮಲ್ಪೆ ಮೀನುಗಾರಿಕಾ ಬೋಟ್ ನಲ್ಲಿದ್ದ ಮೀನುಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೋವಾ ರಾಜ್ಯ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.