ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಇದೇ ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು 77 ಅಡಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಶ್ರೀರಾಮನ ಪ್ರತಿಮೆಯ ಪ್ರಾಣಪ್ರತಿಷ್ಠೆಯನ್ನು ಅಂದು ಬೆಳಿಗ್ಗೆ 11.05 ಕ್ಕೆ ನೆರವೇರಿಸಲಾಗುವುದು. 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ನ್ನು ಪ್ರಧಾನಿ ನರೇಂದ್ರ ಮೋದಿಯವರು ಉಧ್ಘಾಟಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಯ ನವೆಂಬರ್ 28 ರಂದು ಮಧ್ಯಾನ್ಹ 3.45 ಕ್ಕೆ ಗೋವಾದ ಕಾಣಕೋಣದಲ್ಲಿರುವ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಆಗಮಿಸಲಿದ್ದಾರೆ. ಪ್ರಧಾನಿಗಳು ಶ್ರೀಮಠದಲ್ಲಿ ಅಂದು ಸಂಜೆ 5 ಗಂಟೆಯವರೆಗೆ ಉಪಸ್ಥಿತರಿರಲಿದ್ದು ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿಗಳು ಮಾತನಾಡಲಿದ್ದಾರೆ.

ಗೋವಾದ ಕಾಣಕೋಣದಲ್ಲಿರುವ ಪರ್ತಗಾಳಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಹಿನ್ನೆಲೆಯಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಪ್ರಧಾನಿಗಳು ಮಠಕ್ಕೆ ಆಗಮಿಸುತ್ತಿರುವುದು ಕೂಡ ಇನ್ನಷ್ಟು ಸಂಭ್ರಮ ಮನೆಮಾಡಿದೆ.